ರಿಯಾದ್ : ಚಾಲಕ ಮೂರ್ಛೆ ತಪ್ಪಿದಾಗ ಬಸ್ ಚಲಾಯಿಸಿದ ಬಾಲಕಿ

Update: 2017-05-11 14:59 GMT

ರಿಯಾದ್, ಮೇ 11: ಬಸ್ಸಿನ ಚಾಲಕ ಮೂರ್ಛೆ ತಪ್ಪಿ ಬಿದ್ದಾಗ ಬಾಲಕಿಯೊಬ್ಬಳು ತಕ್ಷಣ ಬಸ್ಸನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಂಡು ಚಾಲಕನನ್ನು ರಕ್ಷಿಸಿದ ಹಾಗೂ ಅಪಘಾತವನ್ನು ತಪ್ಪಿಸಿದ ಘಟನೆಯೊಂದು ಸೌದಿ ಅರೇಬಿಯದಲ್ಲಿ ಇತ್ತಿಚೆಗೆ ನಡೆದಿದೆ.

ಶಾಲಾ ಬಸ್ಸೊಂದು ಶಾಲೆ ಬಿಟ್ಟ ಬಳಿಕ ವಿದ್ಯಾರ್ಥಿನಿಯರನ್ನು ಮನೆಗೆ ಕರೆತರುತ್ತಿದ್ದಾಗ ಅದರ ಚಾಲಕ ಪ್ರಜ್ಞೆ ತಪ್ಪಿ ಬಿದ್ದರು ಎಂದು ‘ಅನ್ಹಾ’ ಆನ್‌ಲೈನ್ ಪತ್ರಿಕೆ ವರದಿ ಮಾಡಿದೆ.

ಆಗ ಧೈರ್ಯದಿಂದ ಬಸ್ಸನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಂಡ ಅಶ್ವಖ್ ಅಲ್ ಶಮ್ರಿ, ಬಸ್ಸನ್ನು ಜಾಗರೂಕತೆಯಿಂದ ಚಲಾಯಿಸಿ ಚಾಲಕನನ್ನು ಆಸ್ಪತ್ರೆಗೆ ಕೊಂಡೊಯ್ದರು. ಚಾಲಕನ ಜೀವ ಉಳಿಸಿದ ಬಾಲಕಿಯರನ್ನು ಹೈಲ್ ವಿಶ್ವವಿದ್ಯಾನಿಲಯದ ಅಲ್ ಘಝಲಾಹ್ ಶಾಖೆಯು ಮಂಗಳವಾರ ಸನ್ಮಾನಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News