ಸಾಂಸ್ಕೃತಿಕ ವೇದಿಕೆಯ ಜಾಥಾಕ್ಕೆ ಮಕ್ಕಾ ಗವರ್ನರ್ ಚಾಲನೆ

Update: 2017-05-11 15:35 GMT

ಜಿದ್ದಾ, ಮೇ 11: ಮಕ್ಕಾ ಸಾಂಸ್ಕೃತಿಕ ವೇದಿಕೆಯ ವಾಹನ ಜಾಥಾಕ್ಕೆ ಮಕ್ಕಾ ಗವರ್ನರ್ ರಾಜಕುಮಾರ ಖಾಲಿದ್ ಅಲ್-ಫೈಸಲ್ ಬುಧವಾರ ಚಾಲನೆ ನೀಡಿದರು.

ಈ ವಲಯದ ಪ್ರಾಂತಗಳನ್ನು ಪ್ರತಿನಿಧಿಸುವ 56 ಸರಕಾರಿ ಮತ್ತು ಖಾಸಗಿ ಸಂಸ್ಥೆಗಳ ಸುಮಾರು 100 ಭೂ ಮತ್ತು ಸಮುದ್ರ ವಾಹನಗಳು ಜಾಥಾದಲ್ಲಿ ಪಾಲ್ಗೊಂಡವು. ವಾಹನ ಜಾಥಾವು ಸೌದಿ ಅರೇಬಿಯದ ವಿವಿಧ ಸ್ಥಳಗಳಿಗೆ ಭೇಟಿ ನೀಡಲಿದೆ. ಈ ಜಾಥಾವು ಮಕ್ಕಾ ಸಾಂಸ್ಕೃತಿಕ ವೇದಿಕೆಯು ತನ್ನ ಮೊದಲ ವರ್ಷದಲ್ಲಿ ಆಯೋಜಿಸಿದ ಕೊನೆಯ ಕಾರ್ಯಕ್ರಮಗಳ ಪೈಕಿ ಒಂದಾಗಿದೆ.

ಮಕ್ಕಾ ವಲಯದ ಸಾಧನೆಗಳನ್ನು ಬಿಂಬಿಸುವುದು ಹಾಗೂ ಅದರ ಸಾಂಸ್ಕೃತಿಕ ಮತ್ತು ಸಾಮಾಜಿಕ ಗುರುತನ್ನು ಪಸರಿಸುವುದು ಜಾಥಾದ ಉದ್ದೇಶವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News