ಹಜ್ ಅನುಭವ ಸುಧಾರಣೆಗೆ ಅಧ್ಯಯನ ವೇದಿಕೆ

Update: 2017-05-12 14:52 GMT

ಮದೀನಾ (ಸೌದಿ ಅರೇಬಿಯ), ಮೇ 12: 17ನೆ ಹಜ್, ಉಮ್ರಾ ಮತ್ತು ಸಂದರ್ಶನ ಸಂಶೋಧನಾ ವಿಜ್ಞಾನ ವೇದಿಕೆಯನ್ನು ಸೌದಿ ಅರೇಬಿಯದ ಯುವರಾಜ ಮುಹಮ್ಮದ್ ಬಿನ್ ನಯೀಫ್ ಬುಧವಾರ ಮದೀನಾದ ತೈಬಾ ವಿಶ್ವವಿದ್ಯಾನಿಲಯದಲ್ಲಿ ಉದ್ಘಾಟಿಸಿದರು.

ಹಜ್, ಉಮ್ರಾ ಮತ್ತು ಸಂದರ್ಶನದ ಸ್ಥಿತಿಗತಿಯನ್ನು ವೈಜ್ಞಾನಿಕ ಸಂಶೋಧನೆ ಮತ್ತು ಪರಿಣತ ಅಧ್ಯಯನದ ಮೂಲಕ ಸುಧಾರಿಸುವ ಕಾರ್ಯವನ್ನು ಎತ್ತಿಕೊಳ್ಳಲು ಉಮ್ ಅಲ್-ಕುರಾ ವಿಶ್ವವಿದ್ಯಾನಿಲಯಕ್ಕೆ ಹೆಮ್ಮೆಯೆನಿಸುತ್ತದೆ ಎಂದು ಹಜ್ ಮತ್ತು ಉಮ್ರಾ ಸಂಶೋಧನಾ ಸಂಸ್ಥೆಯ ಡೀನ್ ಸಮಿ ಬರ್ಹಮೈನ್ ಹೇಳಿದರು.

ಆಡಳಿತ, ಆರ್ಥಿಕತೆ, ಆರೋಗ್ಯ ಮತ್ತು ಪರಿಸರ ಅಧ್ಯಯನ ವೇದಿಕೆಯ ಕಾರ್ಯದಲ್ಲಿ ಒಳಗೊಂಡಿದೆ.

200ಕ್ಕೂ ಅಧಿಕ ಸಂಶೋಧಕರು ಮತ್ತು ಸಭೆಯಲ್ಲಿ ಪಾಲ್ಗೊಂಡವರು ವಿವಿಧ ಕ್ಷೇತ್ರಗಳಿಗೆ ಸಂಬಂಧಿಸಿದ 46 ಸಂಶೋಧನಾ ಪ್ರಬಂಧಗಳ ಮೂಲಕ ತಮ್ಮ ಅನುಭವಗಳನ್ನು ಹಂಚಿಕೊಂಡರು.

ಮದೀನಾ ಗವರ್ನರ್ ಹಾಗೂ ವಲಯ ಹಜ್ ಸಮಿತಿಯ ಅಧ್ಯಕ್ಷ ಫೈಸಲ್ ಬಿನ್ ಸಲ್ಮಾನ್ ಹಾಗೂ ಇತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News