ಅತ್ಯಂತ ಎತ್ತರದ ಕಟ್ಟಡದ ಮುಕ್ತಾಯ ವಿಳಂಬ

Update: 2017-05-12 14:56 GMT

ರಾಜಕುಮಾರಜಿದ್ದಾ, ಮೇ 12: ಜಗತ್ತಿನ ಅತ್ಯಂತ ಎತ್ತರದ ಕಟ್ಟಡ ಪೂರ್ಣಗೊಳ್ಳುವ ಸಮಯವನ್ನು 2019ಕ್ಕೆ ಮುಂದಕ್ಕೆ ಹಾಕಲಾಗಿದೆ ಎಂದು ರಾಜಕುಮಾರ ಅಲ್ವಲೀದ್ ಬಿನ್ ತಲಾಲ್ ಗುರುವಾರ ತಿಳಿಸಿದರು.

‘ಜಿದ್ದಾ ಟವರ್’ ಒಂದು ಕಿಲೋಮೀಟರ್‌ಗೂ ಹೆಚ್ಚಿನ ಎತ್ತರ (ಸುಮಾರು 3,300 ಅಡಿ)ಕ್ಕೆ ಏರಲಿದೆ. ಅದು ಪೂರ್ಣಗೊಂಡಾಗ ಜಗತ್ತಿನ ಪ್ರಸಕ್ತ ಅತ್ಯಂತ ಎತ್ತರದ ಕಟ್ಟಡ ದುಬೈನ ‘ಬುರ್ಜ್ ಖಲೀಫಾ’ವನ್ನು ಹಿಂದಿಕ್ಕಲಿದೆ.

 ‘‘ಯೋಜನೆ ವಿಳಂಗೊಂಡಿದೆ. ಆದರೆ, ಅದು 2019ರಲ್ಲಿ ಪೂರ್ಣಗೊಳ್ಳಲಿದೆ’’ ಎಂದು ಕೆಂಪು ಸಮುದ್ರದ ಪಕ್ಕದಲ್ಲಿರುವ ಕಟ್ಟಡ ನಿರ್ಮಾಣ ಸ್ಥಳಕ್ಕೆ ಭೇಟಿ ನೀಡಿದ ರಾಜಕುಮಾರ ಅಲ್ವಲೀದ್ ಎಎಫ್‌ಪಿಗೆ ತಿಳಿಸಿದರು.

ಕಟ್ಟಡವನ್ನು ನಿರ್ಮಿಸುತ್ತಿರುವ ಜಿದ್ದಾ ಎಕನಾಮಿಕ್ ಕಂಪೆನಿಯ ಮಾತೃ ಸಂಸ್ಥೆ ಕಿಂಗ್‌ಡಂ ಹೋಲ್ಡಿಂಗ್ ಕೊ ಇದರ ಅಧ್ಯಕ್ಷರು ರಾಜಕುಮಾರ ಅಲ್ವಲೀದ್.
2011ರ ಆಗಸ್ಟ್‌ನಲ್ಲಿ ಅಲ್ವಲೀದ್ ಯೋಜನೆಯನ್ನು ಘೋಷಿಸಿದ್ದರು. 2014 ನವೆಂಬರ್ ವೇಳೆಗೆ ನಾಲ್ಕು ಅಂತಸ್ತಿನ ಪಂಚಾಂಗ ಸಿದ್ಧವಾಗಿತ್ತು. 2018ರಲ್ಲಿ ಕಟ್ಟಡ ಪೂರ್ಣಗೊಳ್ಳುವುದು ಎಂದು ಅವರು ಘೋಷಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News