ಸೌದಿಯಲ್ಲಿ ಉಗ್ರ ದಾಳಿ : 2 ಸಾವು, 10 ಮಂದಿಗೆ ಗಾಯ

Update: 2017-05-13 14:47 GMT

ಜಿದ್ದಾ (ಸೌದಿ ಅರೇಬಿಯ), ಮೇ 13: ಸೌದಿ ಅರೇಬಿಯದ ಈಸ್ಟರ್ನ್ ಪ್ರಾವಿನ್ಸ್‌ನ ಕಾತಿಫ್‌ನಲ್ಲಿ ದುಷ್ಕರ್ಮಿಗಳು ಅಭಿವೃದ್ಧಿ ಕಾಮಗಾರಿ ನಡೆಸುತ್ತಿದ್ದ ಕಾರ್ಮಿಕರ ಮೇಲೆ ಗುಂಡು ಹಾರಿಸಿದಾಗ ಸೌದಿ ಅರೇಬಿಯದ ಮಗು ಮತ್ತು ಪಾಕಿಸ್ತಾನದ ವ್ಯಕ್ತಿಯೊಬ್ಬರು ಸಾವಿಗೀಡಾಗಿದ್ದಾರೆ ಹಾಗೂ 10 ಮಂದಿ ಗಾಯಗೊಂಡಿದ್ದಾರೆ.

ಸ್ಥಳಕ್ಕೆ ಬಂದ ದುಷ್ಕರ್ಮಿಗಳು ಮೊದಲು ಕಾರ್ಮಿಕರತ್ತ ಗುಂಡು ಹಾರಿಸಿದರು. ಬಳಿಕ ಅಲ್ಲಿ ನಿಂತಿದ್ದವರು ಹಾಗೂ ಅಲ್ಲಿಂದ ಹಾದುಹೋಗುತ್ತಿದ್ದವರ ಮೇಲೆ ಗುಂಡು ಹಾರಿಸಿದರು.

ಅವರು ಪರಾರಿಯಾಗುವ ಮುನ್ನ ಅಭಿವೃದ್ಧಿ ಕಾರ್ಯವನ್ನು ನಡೆಸುತ್ತಿದ್ದ ಕಂಪೆನಿಯ ವಾಹನಗಳನ್ನು ಸ್ಫೋಟಿಸಿದರು.

ಅಲ್-ಮಸೂರ ಜಿಲ್ಲೆಯಲ್ಲಿ ಖಾಲಿಬಿದ್ದಿರುವ ಹಳೆಯ ಮನೆಗಳನ್ನು ಕೆಡಹುವುದನ್ನು ತಡೆಯುವುದು ಈ ದಾಳಿಯ ಉದ್ದೇಶ ಎಂದು ಭಾವಿಸಲಾಗಿದೆ. ಖಾಲಿ ಬಿದ್ದಿರುವ ಮನೆಗಳನ್ನು ಭಯೋತ್ಪಾದಕರು ಅಪಹರಣ ಮತ್ತು ಮಾದಕ ದ್ರವ್ಯ ದಂಧೆಗಳಿಗಾಗಿ ತಮ್ಮ ಅಡಗುದಾಣಗಳನ್ನಾಗಿಸಿದ್ದರು ಎಂದು ಹೇಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News