ಸೌದಿಅರೇಬಿಯದ ಹಿರಿಯ ಪತ್ರಕರ್ತ ತುರ್ಕಿ ಅಲ್ ಸುದೈರಿ ನಿಧನ

Update: 2017-05-15 10:56 GMT

ರಿಯಾದ್,ಮೇ 15: ಸೌದಿಯ ಹಿರಿಯ ಪತ್ರಕರ್ತ ಅಲ್ ರಿಯಾದ್ ಪತ್ರಿಕೆಯ ಸಂಪಾದಕ ತುರ್ಕಿ ಅಲ್ ಸುದೈರಿ ನಿಧನರಾಗಿದ್ದಾರೆ. ಅವರಿಗೆ 75ವರ್ಷ ವಯಸ್ಸಾಗಿತ್ತು. ಸೌದಿ ಅರೇಬಿಯ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಅವರು ಕಾರ್ಯನಿರ್ವಹಿಸಿದ್ದಾರೆ.

ಸೋಮವಾರ ಸಂಜೆ ಉಮ್ಮುಲ್ ಹಮಾಮ್ ಮಸೀದಿಯಲ್ಲಿ ಅವರ ಜನಾಝ ನಮಾಝ್ ನಿರ್ವಹಿಸಲಾಗುವುದು ನಂತರ ಅವರ ಮೃತದೇಹದ ದಫನ ಕಾರ್ಯ ನೆರವೇರಲಿದೆ. ಅಸ್ಸುದೈರಿ ನಿಧನಕ್ಕೆ ಸೌದಿ ದೊರೆ ಸಲ್ಮಾನ್ ಶೋಕ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News