ಯುಎಇ: ಅಧಿಕೃತ ಶಾಲಾ ಕ್ಯಾಲೆಂಡರ್ ಪ್ರಕಟ

Update: 2017-05-15 14:26 GMT

ದುಬೈ, ಮೇ 15: ಅಧಿಕೃತ ಯುಎಇ ಶಾಲಾ ಕ್ಯಾಲೆಂಡರ್ 2017-18ನ್ನು ಯುಎಇ ಶಿಕ್ಷಣ ಸಚಿವಾಲಯದ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ.
ಈ ಕ್ಯಾಲೆಂಡರ್ ಪ್ರಕಾರ, ಮುಂದಿನ ಶಾಲಾ ವರ್ಷ ವಿದ್ಯಾರ್ಥಿಗಳಿಗೆ ಸೆಪ್ಟಂಬರ್ 10ರಂದು ಹಾಗೂ ಶಿಕ್ಷಕರಿಗೆ ಸೆಪ್ಟಂಬರ್ 3ರಂದು ಆರಂಭವಾಗಲಿದೆ.
ಚಳಿಗಾಲದಲ್ಲಿ ವಿದ್ಯಾರ್ಥಿಗಳಿಗೆ ಮೂರು ವಾರಗಳ ಹಾಗೂ ವಸಂತಕಾಲದಲ್ಲಿ ಎರಡು ವಾರಗಳ ವಿರಾಮವಿದೆ.

ವಿದ್ಯಾರ್ಥಿಗಳಿಗೆ ಜೂನ್ 28 ಕೊನೆಯ ಶಾಲಾ ದಿನವಾದರೆ, ಶಿಕ್ಷಕರು ಜುಲೈ 5ರವರೆಗೆ ಕೆಲಸ ಮಾಡುತ್ತಾರೆ. ಶಾಲಾ ವರ್ಷವು ಒಟ್ಟು 181 ದಿನಗಳನ್ನು ಹೊಂದಿರುತ್ತದೆ.

ಜ್ಞಾನ ಮತ್ತು ಮಾನವ ಅಭಿವೃದ್ಧಿ ಪ್ರಾಧಿಕಾರ (ಕೆಎಚ್‌ಡಿಎ)ವು ದುಬೈ ಖಾಸಗಿ ಶಾಲೆಗಳಿಗೂ ತನ್ನ ವೆಬ್‌ಸೈಟ್‌ನಲ್ಲಿ ಅಧಿಕೃತ ಶಾಲಾ ಕ್ಯಾಲೆಂಡರನ್ನು ಪ್ರಕಟಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News