ಕಡಿಮೆ ಆದಾಯವಿರುವ ಸ್ವದೇಶಿಗಳಿಗೆ ರಮಝಾನ್‌ನಲ್ಲಿ ಹೆಚ್ಚು ಸಹಾಯ: ಬಹರೈನ್ ಸಚಿವಸಂಪುಟ ನಿರ್ಧಾರ

Update: 2017-05-16 10:46 GMT

ಮನಾಮ(ಬಹರೈನ್), ಮೇ 16: ಬಹರೈನ್ ಸರಕಾರ ಆರ್ಥಿಕವಾಗಿ ಹಿಂದುಳಿದ ಸ್ವದೇಶಿಯರಿಗೆ , ಸ್ವದೇಶಿ ಅಂಗವಿಕಲರಿಗೆ ರಮಝಾನ್ ತಿಂಗಳಲ್ಲಿ ದುಪ್ಟಟ್ಟುಆರ್ಥಿಕ ನೆರವು ನೀಡಲಿದೆ. ನಿನ್ನೆ ಪ್ರಧಾನಿ ಖಲೀಫ ಬಿನ್ ಸಲ್ಮಾನ್ ಅಲ್‌ಖಲೀಫರ ಅಧ್ಯಕ್ಷತೆಯಲ್ಲಿ ನಡೆದಿದ್ದ ಸಚಿವಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ. 

ಸಾಮಾಜಿಕ ಸುರಕ್ಷಿತತೆ ಖಾತರಿಗೊಳಿಸುವ ನಿಟ್ಟಿನಲ್ಲಿ ಮತ್ತು ಸ್ವದೇಶಿಪ್ರಜೆಗಳಿಗೆ ಉತ್ತಮ ಜೀವನ ಸೌಕರ್ಯವನ್ನು ಒದಗಿಸಲು ಸರಕಾರ ಹೆಚ್ಚುಆದ್ಯತೆ ನೀಡಲು ಬಯಸಿದೆ. ಇದೇ ವೇಳೆ ಬಹರೈನ್ ಗೆ ಪಿಫ ಸಮ್ಮೇಳನಕ್ಕೆ ಆತಿಥ್ಯ ನೀಡಲು ಸಾಧ್ಯವಾಗಿದ್ದಕ್ಕೆ ಪ್ರಧಾನಿ ಅಲ್ ಖಲೀಫ ಹರ್ಷ ವ್ಯಕ್ತಪಡಿಸಿದ್ದಾರೆ. ಪ್ರಥಮಬಾರಿಯಾಗಿ ಬಹರೈನ್ ನಲ್ಲಿ ಗ್ರಾವಿಟಿ ಇಂಡೋರ್ ಸ್ಕೈ ಡೈವಿಂಗ್‌ನ ಜಿಸಿಸಿ ಮಟ್ಟದ ಸ್ಪರ್ಧೆಗಳನ್ನು ಯಶಸ್ವಿಯಾಗಿ ನಡೆಸಿರುವುದು ಹೆಮ್ಮೆಯ ವಿಚಾರವಾಗಿದೆ ಎಂದು ಪ್ರಧಾನಿ ಅಲ್‌ಖಲೀಫ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕ್ರೀಡಾ ಕ್ಷೇತ್ರದಲ್ಲಿ ಹೆಚ್ಚಿನ ಸಾಧನೆಗೆ ಈ ಕ್ರೀಡಾಕೂಟ ಬಹರೈನ್‌ಗೆ ಹೆಚ್ಚು ಸಹಕಾರಿಯಾಗಲಿದೆ ಎನ್ನುವ ಆಶಾವಾದವನ್ನು ಅವರು ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News