ರಮಝಾನ್‌ಗೆ ಸಿದ್ಧತೆ : ಚಿಲ್ಲರೆ ಅಂಗಡಿಗಳ ತಪಾಸಣೆ

Update: 2017-05-16 15:04 GMT

ರಿಯಾದ್, ಮೇ 16: ರಮಝಾನ್ ತಿಂಗಳು ಶೀಘ್ರವೇ ಆರಂಭಗೊಳ್ಳಲಿರುವ ಹಿನ್ನೆಲೆಯಲ್ಲಿ, ವಾಣಿಜ್ಯ ಮತ್ತು ಹೂಡಿಕೆ ಸಚಿವಾಲಯ ಸೌದಿ ಅರೇಬಿಯದ ಚಿಲ್ಲರೆ ಅಂಗಡಿಗಳ ತಪಾಸಣೆ ಅಭಿಯಾನವನ್ನು ಆರಂಭಿಸಿದೆ. ವಸ್ತುಗಳು ಸರಿಯಾದ ಪ್ರಮಾಣದಲ್ಲಿ ಲಭ್ಯವಿದೆಯೇ ಎಂಬುದನ್ನು ಪರಿಶೀಲಿಸಲು ಹಾಗೂ ಕಲಬೆರಕೆ ವಸ್ತುಗಳ ಮಾರಾಟವನ್ನು ನಿಯಂತ್ರಿಸಲು ಈ ಕ್ರಮವನ್ನು ತೆಗೆದುಕೊಳ್ಳಲಾಗುತ್ತಿದೆ.

ಮಾರಾಟಕ್ಕಿಟ್ಟ ಎಲ್ಲ ವಸ್ತುಗಳು ಬೆಲೆ ಚೀಟಿಯನ್ನು ಹೊಂದಿರಬೇಕು ಹಾಗೂ ವಾಯಿದೆ ಮುಗಿಯುವ ದಿನಾಂಕಕ್ಕೆ ಮೊದಲೇ ಅವುಗಳ ಮಾರಾಟವಾಗಬೇಕು ಎಂದು ತಪಾಸಕರು ಸೂಚನೆ ನೀಡಿದ್ದಾರೆ.

ಅಂಗಡಿಗಳಲ್ಲಿ ರಾಷ್ಟ್ರೀಯ ಕ್ಯಾಶ್ ರಿಜಿಸ್ಟರ್ ನೀಡುವ ರಶೀದಿಗಳಿಗೆ ವಸ್ತುಗಳ ಬೆಲೆ ಚೀಟಿಗಳು ಹೊಂದಿಕೆಯಾಗಬೇಕು. ಮಾರಾಟ ಹೆಚ್ಚಿಸುವ ತಂತ್ರಗಾರಿಕೆಗಳು ನೈಜವಾಗಿರಬೇಕು ಹಾಗೂ ಗ್ರಾಹಕರನ್ನು ವಂಚಿಸುವ ಉದ್ದೇಶವನ್ನು ಹೊಂದಿರಬಾರದು ಎಂದು ತಪಾಸಕರು ಸ್ಪಷ್ಟಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News