ಬಳಸಿ ಬಿಸಾಡುವ ಚಾರ್ಜರ್‌ಗಳಿಗೆ ದುಬೈಯಲ್ಲಿ ನಿಷೇಧ !

Update: 2017-05-18 10:56 GMT

ದುಬೈ, ಮೇ 18: ಒಂದೇ ಬಾರಿ ಉಪಯೋಗಿಸಿ ಬಿಸಾಡುವ ಮೊಬೈಲ್ ಚಾರ್ಜರ್‌ಗಳನ್ನು ದುಬೈಯಲ್ಲಿ ನಿಷೇಧಿಸಲಾಗಿದೆ. ಇಂತಹ ಮೊಬೈಲ್ ಫೋನ್ ಚಾರ್ಜರ್‌ಗಳುಪರಿಸರಕ್ಕೆ ಹಾನಿಕರ ಎಂದು ಬೆಟ್ಟುಮಾಡಿ ನಗರಸಭೆ ಕ್ರಮಕೈಗೊಂಡಿದೆ. ನಗರಸಭೆಯ ಡೈರಕ್ಟರ್ ಜನರಲ್ ಹುಸೈನ್ ನಾಸರ್ ಲೂತ್ತಿ ಆದೇಶವನ್ನು ಹೊರಡಿಸಿದ್ದಾರೆ. ಇಂತಹ ಚಾರ್ಜರ್‌ಗಳಿಂದ ಇಲೆಕ್ಟ್ರಾನಿಕ್ ಮಾಲಿನ್ಯ ಹೆಚ್ಚಳವಾಗುತ್ತಿದೆ. ಇದು ಪರಿಸರಕ್ಕೆ ಹಾನಿಕರವಾಗಿದೆ. ಜೊತೆಗೆ ಇದರಿಂದ ಬಳಕೆದಾರರಿಗೆ ಲಾಭವಿಲ್ಲ ಎಂದು ನಗರಸಭೆಯ ಆರೋಗ್ಯ ವಿಭಾಗದ ನಿರ್ದೇಶಕ ಇಂಜಿನಿಯರ್ ರೆದ ಸಲ್ಮಾನ್ ಹೇಳಿದರು.

ಆರ್ಥಿಕವಾಗಿ ಮಾತ್ರವಲ್ಲ ಪರಿಸರಕ್ಕೂ ಇದು ಉತ್ತಮವಲ್ಲ. ಒಮ್ಮೆ ಬಳಸಿಬಿಸಾಕುವ ಹಾಗೂ ರಿಚಾರ್ಜ್ ಮಾಡಲು ಆಗದ ಚಾರ್ಜರ್‌ಗಳ ಮಾರಾಟ ಮಾಡಬಾರದು,ಮತ್ತು ಅದನ್ನು ಈಗಾಗಲೇ ತರಿಸಿಕೊಂಡಿದ್ದರೆ ಅವುಗಳನ್ನು ತರಿಸಿಕೊಂಡ ರಾಷ್ಟ್ರಕ್ಕೆ ಮರಳಿ ಕಳುಹಿಸಬೇಕೆಂದು ಚಾರ್ಜರ್ ಮಾರಾಟ ಸಂಸ್ಥೆಗಳಿಗೆ ನಗರ ಸಭೆ ಕಟ್ಟು ನಿಟ್ಟಾಗಿ ಸೂಚಿಸಿದೆ. ನಗರಸಭೆಯ ಆದೇಶ ಉಲ್ಲಂಘಿಸುವ ಸಂಸ್ಥೆಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದು ನಗರಸಭೆ ಡೈರಕ್ಟರ್ ಜನರಲ್ ಹುಸೈನ್ ನಾಸರ್‌ಲೂತ್ತಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News