ಕೆಸಿಎಫ್: ನೂತನ 'ಖುಬಾ ಯುನಿಟ್' ರಚನೆ

Update: 2017-05-20 11:23 GMT
ಅಬ್ದುರ್ರಝಾಕ್ ಬೈತಡ್ಕ, ಝಕರಿಯಾ ಕೊಡಗು, ನಿಯಾಝ್ ಕಾಟಿಪಳ್ಳ

ಸೌದಿ ಅರೇಬಿಯಾ, ಮೇ 20: ಕರ್ನಾಟಕ ಕಲ್ಚರಲ್ ಫೌಂಡೇಶನ್ (ಕೆ.ಸಿ.ಎಫ್) ಮದೀನಾ ಮುನವ್ವರ ಸೆಕ್ಟರ್ ಅಧೀನದಲ್ಲಿ ನೂತನ  'ಖುಬಾ ಯುನಿಟ್' ರಚನೆಯನ್ನು ಸೆಕ್ಟರ್ ನ ಪಿ.ಆರ್. ವಿಂಗ್ ಅಧ್ಯಕ್ಷ ಅಬ್ದುಲ್ ಸಮದ್ ಕೊಡಗು ಅವರ ಅಧ್ಯಕ್ಷತೆಯಲ್ಲಿ ಅಬ್ದುರ್ರಝಾಕ್ ಬೈತಡ್ಕ ಅವರ ನಿವಾಸದಲ್ಲಿ ನಡೆಯಿತು.

ಚುನಾವಣಾಧಿಕಾರಿಯಾಗಿ ಕೆಸಿಎಫ್ ಮದೀನಾ ಮುನವ್ವರ  ಸೆಕ್ಟರ್ ಅದ್ಯಕ್ಷ ಆಶ್ರಫ್ ಸಖಾಫಿ ನೂಜಿ ಅವರ ನೇತೃತ್ವದಲ್ಲಿ  ನೂತನ  ಸಮಿತಿಯನ್ನು ರಚನೆ ಮಾಡಲಾಯಿತು.

ನೂತನ ಖುಬಾ  ಯುನಿಟ್ ಅಧ್ಯಕ್ಷರಾಗಿ ಅಬ್ದುರ್ರಝಾಕ್ ಬೈತಡ್ಕ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಝಕರಿಯಾ ಕೊಡಗು, ಅವರನ್ನು ಆಯ್ಕೆಮಾಡಲಾಯಿತು. 
 

ಕೋಶಾಧಿಕಾರಿಯಾಗಿ ನಿಯಾಝ್ ಕಾಟಿಪಳ್ಳ , ನಿರ್ದೇಶಕರಾಗಿ ಅಬ್ದುಸಮದ್ ಕೊಡಗು, ಸಂಘಟನಾ ವಿಭಾಗದ ಅಧ್ಯಕ್ಷರಾಗಿ ಉಮರ್ ಕೊಡಗು ಅವರನ್ನು ನೇಮಿಸಲಾಯಿತು. 

ರಫೀಕ್ ಕೊಡಗು, ಯೂಸುಫ್ ಕುಶಾಲ ನಗರ, ಸಾದಿಕ್ ಬೇಂಗಿಲ, ಫಾರೂಖ್ ಹೊಸಂಗಡಿ, ಮುಹಮ್ಮದ್ ಕೊಡಗು ಇವರನ್ನು   ಯುನಿಟ್ ನ ಇತರ ಸದಸ್ಯರನ್ನಾಗಿ ಆಯ್ಕೆ ಮಾಡಲಾಯಿತು.

ಕೆ.ಸಿ.ಎಫ್ ರಾಷ್ಟ್ರೀಯ ಸಮಿತಿಯ ಸದಸ್ಯರಾದ ಅಶ್ರಫ್ ಹಾಜಿ ಕಿನ್ಯ, ಸೆಕ್ಟರ್ ನ ಪ್ರಧಾನ ಕಾರ್ಯದರ್ಶಿ ಅಶ್ರಫ್ ನ್ಯಾಷನಲ್, ಸೆಕ್ಟರ್ ಕಾರ್ಯಕಾರಿ ಸಮಿತಿಯ ಸದಸ್ಯ  ಆಸಿಫ್ ಬದ್ಯಾರ್, ಇಲ್ಯಾಸ್ ಮಂಜೇಶ್ವರ ಮತ್ತಿತರರು  ಉಪಸ್ಥಿತರಿದ್ದರು.

ಹುಸೈನಾರ್ ಮಾಪಲ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಖುಬಾ ಯುನಿಟ್ ಪ್ರಧಾನ ಕಾರ್ಯದರ್ಶಿ ಝಕರಿಯಾ ಕೊಡಗು ವಂದಿಸಿದರು.

Writer - ಆಸಿಫ್ ಬದ್ಯಾರ್

contributor

Editor - ಆಸಿಫ್ ಬದ್ಯಾರ್

contributor

Similar News