ದುಬೈ: ಕನ್ನಡ ಪಾಠ ಶಾಲೆಯ ವಾರ್ಷಿಕೋತ್ಸವ

Update: 2017-05-23 15:27 GMT

ದುಬೈ, ಮೇ 23: ಕನ್ನಡ ಮಿತ್ರರು  ಯುಎಇ ಸಂಘದ  ವತಿಯಿಂದ  ಅನಿವಾಸಿ  ಕನ್ನಡಿಗರ  ಮಕ್ಕಳಿಗೆ  ಮಾತೃ ಭಾಷೆ  ಕನ್ನಡವನ್ನು  ಕಲಿಸುವ  ಪ್ರಯತ್ನದಫಲವಾಗಿ ಕಳೆದ 3 ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವ ಕನ್ನಡ ಪಾಠ ಶಾಲೆಯ  2017ನೆ ಸಾಲಿನ  ಶಾಲಾ ವಾರ್ಷಿಕೋತ್ಸವವು ದುಬೈಯಲ್ಲಿ ನಡೆಯಿತು.

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಕರ್ನಾಟಕ ಸರ್ಕಾರದ ಶಿಕ್ಷಣ ಸಚಿವ  ತನ್ವಿರ್ ಸೇಠ್ ಉಪಸ್ಥಿತಿಯಲ್ಲಿ ಯುಎಇ ಕನ್ನಡ ಮಿತ್ರರು ಸಂಘದ ಅಧ್ಯಕ್ಷ ಶಶಿಧರ್ ನಾಗರಾಜಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆಯಿತ್ತು. ದುಬೈ ಭಾರತೀಯ ದೂತಾವಾಸ ಕೇಂದ್ರದ ಮುಖ್ಯಸ್ಥ  ದೀಪ ಜೈನ್, ಕರ್ನಾಟಕ ಅನಿವಾಸಿ ಭಾರತೀಯ ಸಮಿತಿಯ ಯುಎಇ  ಅಧ್ಯಕ್ಷ ಪ್ರವೀಣ್ ಶೆಟ್ಟಿ, ಚಿತ್ರ ರಂಗದ ರೋಜರ್ ನಾರಾಯಣ್ , ಸೆನೆಟ್ ಸದಸ್ಯ ಯುಟಿ ಇಫ್ತಿಕಾರ್ ಮತ್ತು ಶ್ರೀಮತಿ ಸಬ್ರಿನಾ ಸೇಠ್ ಮುಂತಾದ ಗಣ್ಯರು ಉಪಸ್ಥಿತರಿದ್ದರು.

 ಶಿಕ್ಷಣ ಸಚಿವ ತನ್ವಿರ್ ಸೇಠ್  ಕನ್ನಡ ಪಾಠ ಶಾಲೆಗೆ ಬೇಕಾದ ಸವಲತ್ತುಗಳನ್ನು ಕರ್ನಾಟಕ ಸರ್ಕಾರದ ವತಿಯಿಂದ  ನೀಡುವ ಭರವಸೆಯನ್ನು  ನೀಡಿದರು. ಯುಎಇ ಯಲ್ಲಿ  ಕನ್ನಡಿಗರು ವಿವಿಧ ಸಂಘ ಸಂಸ್ಥೆಗಳನ್ನು ಕಟ್ಟಿ ಕನ್ನಡದ ಉಳಿವಿಗಾಗಿ ಶ್ರಮಿಸುದನ್ನು ಶ್ಲಾಗಿಸಿದರು.

ಶಾಲಾ ಮಕ್ಕಳಿಂದ ವಿವಿಧ ರೀತಿಯ ಸಾಂಸ್ಕೃತಿಕ ಮತ್ತು ಸಾಮಾಜಿಕ ಕಳ ಕಳಿಯನ್ನು ಬಿಂಬಿಸುವ ಮತ್ತು ಕನ್ನಡ ನಾಡಿನ ಇತಿಹಾಸದ ಬಗ್ಗೆ ಮತ್ತು ಕನ್ನಡದ ಬಗ್ಗೆ ಕಾರ್ಯಕ್ರಮ ನಡೆಯಿತು.

ಕನ್ನಡ ಪಾಠಶಾಲೆ ಕಾರ್ಯಕ್ರಮದ ಕಾರ್ಯಕಾರಿ ಸಮಿತಿಯ ಸದಸ್ಯರುಗಳಾದ  ಪ್ರೇಮಲತಾ, ಸತೀಶ್ ಹೆಗ್ಡೆ, ನಾಗರಾಜ್ ರಾವ್, ಜೀತೆಂದ್ರ,  ವಿಜಯಕುಮಾರ್,  ಹರೀಶ್ ಕೋಡಿ,  ಸುನಿಲ್ ಗವಾಸ್ಕರ್,  ಸಿದ್ದಲಿಂಗೇಶ್, ಗೋವಿಂದ್ ಭಟ್, ವೆಂಕಟರಮಣ ಕಾಮತ್, ವಿನಯ್,  ಪುಟ್ಟರಾಜು, ಎಸ್ ಎಸ್ ಮೀಟಿ, ಸುಧೀರ್ ಭಂಡಾರಿ ಹಾಗೂ ಇತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. 

Writer - ರಫೀಕಲಿ ಕೊಡಗು

contributor

Editor - ರಫೀಕಲಿ ಕೊಡಗು

contributor

Similar News