ಯಾಂಬು YACA ಟಿ 10 ರಮಾದಾನ್ ಕಪ್ 2017: ಟೀಮ್ ಬಿನ್ ಫಹದ್ ಮಡಿಲಿಗೆ

Update: 2017-05-23 17:06 GMT

ಯಾಂಬು, ಮೇ 23:  ಶುಕ್ರವಾರ ನಡೆದ ಯಾಂಬು ಅಲ್ ಸನಯ್ಯ ಕ್ರಿಕೆಟ್ ಅಸ್ಸೊಸಿಯೇಶನ್ ಟಿ 10 ರಮಾದಾನ್ ಕಪ್ 2017 ರ ಫೈನಲ್ ನಲ್ಲಿ ಜೊಟುನ್ ತಂಡವನ್ನು ಸೂಪರ್ ಒವರ್ನಲ್ಲಿ ಸೊಲಿಸಿ ಬಿನ್ ಫಹದ್ ತಂಡ ಚಾಂಪಿಯನ್ ಪಟ್ಟವನು ಮಡಿಲಿಗೆರಿಸಿತು.

ಬಿನ್ ಫಹದ್ ಸೆಮಿ ಫೈನಲ್ ನಲ್ಲಿ ಪಂಜಾಬ್ ಎಲೆವೆನ್ ತಂಡವನ್ನು 7 ವಿಕೆಟ್ ಗಳಲ್ಲಿ ಸೊಲಿಸಿ ಫೈನಲ್ ಪ್ರವೇಶಿಸಿದರೆ, ಜೊಟುನ್ ತಂಡವು ಯಂಗ್ ಫೈಟರ್ ತಂಡ ವನ್ನು ಸೊಲಿಸಿ ಫೈನಲ್ ಪ್ರವೆಶಿಸಿತ್ತು.

ಫೈನಲ್ ನಲ್ಲಿ ಟೊಸ್ ಗೆದ್ದು ಫೀಲ್ಡಿಂಗ್ ಆಯ್ದು ಕೊಂಡ ಟೀಂ ಬಿನ್ ಫಹದ್ ತಂಡ 79 ರನ್ ಗಳಿಗೆ ಜೊತುನ್ ತಂಡವನ್ನು ಆಲ್ ಔಟ್ ಮಾಡಿ 80 ರನ್ ಗಳ ಗುರಿ ಪಡೆದು ಹಫೀಜ್ ನಾಸಿರ ಹಾಗೂ ಮೊಹಾಮ್ಮದ್ ಯೂನಸ್ ರಿಂದ ಬ್ಯಾಟಿಂಗ್ ಆರಂಭಿಸಿ ಮೊದಲ ಎಸೆತದಲ್ಲಿ ಹಫೀಜ್ ಬಾರಿಸಿದ ಚೆಂಡಿಗೆ 2 ಓಟಗಳು ಪಡೆಯುವ ಭರದಲ್ಲಿ ರನೌಟ್ ಆಗಿ ಮೊದಲ ಆಘಾತವನ್ನುಂಟು ಮಾಡಿದರು. ಆದರೆ ತಾಬಿಶ್ ರವರ ಉತ್ತಮ ಆಟದ ಮೂಲಕ ತಂಡ ಟಾರ್ಗೆಟ್ ಮೊತ್ತವನ್ನು ಬೆನ್ನಟ್ಟಿ ಬಂದರು.

 ಬೌಲಿಂಗ್ ನಡೆಸಿದ ಹಾಫೀಝ್ 2 ರನ್ ನೀಡಿ 1 ವಿಕೆಟ್ ಪಡೆದು ಟೀಮ್ ಬಿನ್ ಫಹದ್ ಚಾಂಪಿಯನ್ ಆಗುವಲ್ಲಿ ಮಹತ್ತರ ಪಾತ್ರ ವಹಿಸಿದರು.

ಫೈನಲ್ ಪಂದ್ಯದಲ್ಲಿ ಪಂದ್ಯ ಪುರುಷೋತ್ತಮರಾಗಿ ತಾಬಿಶ್ ಪಡೆದು ಕೊಂಡರೆ ಪಂದ್ಯಾಕೂಟದ ಉತ್ತಮ ಆಟಗಾರನಾಗಿ ಅಫ್ತಾಬ್ ಬಿನ್ ಫಹದ್ ತಂಡದಿಂದ ಆಯ್ಕೆ ಆದರು. ಉತ್ತಮ ಎಸೆತಗಾರ ನಾಗಿ ಮಂಗಳೂರ್ ಚಾಲೆಂಜರ್ಸ್ ನ ಶಬ್ಬೀರ್ ಪಡೆದು ಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News