ಬಹ್ರೇನ್‌ನಲ್ಲಿ ಗಲಭೆ: 5 ಸಾವು, 286 ಬಂಧನ

Update: 2017-05-24 16:01 GMT

ದುಬೈ, ಮೇ 24: ಬಹ್ರೇನ್‌ನ ಹಳ್ಳಿಯೊಂದರಲ್ಲಿ ಉನ್ನತ ಧಾರ್ಮಿಕ ಮುಖಂಡರೊಬ್ಬರ ಬೆಂಬಲಿಗರು ಮಂಗಳವಾರ ನಡೆಸಿದ ಪ್ರತಿಭಟನೆಯ ವೇಳೆ ಪೊಲೀಸರು ನಡೆಸಿದ ಗೋಲಿಬಾರಿನಲ್ಲಿ ಐವರು ಮೃತಪಟ್ಟಿದ್ದಾರೆ ಎಂದು ಆಂತರಿಕ ಸಚಿವಾಲಯ ತಿಳಿಸಿದೆ.

‘‘ರಾಜಧಾನಿ ಮನಾಮ ಸಮೀಪದ ದಿರಝ್‌ನಲ್ಲಿ ಧಾರ್ಮಿಕ ಮುಖಂಡ ಇಸಾ ಕಾಸಿಮ್‌ರ ಮನೆಯ ಹೊರಗೆ ಧರಣಿ ನಡೆಸುತ್ತಿದ್ದ ಪ್ರತಿಭಟನಕಾರರನ್ನು ಚದುರಿಸಲು ಪೊಲೀಸರು ಗೋಲಿಬಾರು ನಡೆಸಿದಾಗ ಐವರು ಕಾನೂನು ಉಲ್ಲಂಘಕರು ಮೃತಪಟ್ಟಿದ್ದಾರೆ’’ ಎಂದು ಸಚಿವಾಲಯ ಟ್ವಿಟರ್‌ನಲ್ಲಿ ಹೇಳಿದೆ.

ಕಲ್ಲುಗಳು ಮತ್ತು ಮೊಲೊಟೊವ್ ಕಾಕ್‌ಟೇಲ್‌ಗಳನ್ನು ಭದ್ರತಾ ಪಡೆಗಳತ್ತ ಎಸೆಯುತ್ತಿದ್ದ ಪ್ರತಿಭಟನಕಾರರ ಮೇಲೆ ಪೊಲೀಸರು ಗುಂಡು ಹಾರಿಸಿದಾಗ ಹಲವಾರು ನಾಗರಿಕರು ಗಾಯಗೊಂಡಿದ್ದಾರೆ ಎಂಬುದಾಗಿ ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

‘‘ಒಟ್ಟು 286 ಮಂದಿಯನ್ನು ಬಂಧಿಸಲಾಗಿದೆ. ಅವರಲ್ಲಿ ಜವು ಸೆರೆಮನೆಯಿಂದ ತಪ್ಪಿಸಿಕೊಂಡಿರುವ ಕೈದಿಗಳೂ ಇದ್ದಾರೆ’’ ಎಂದು ಸಚಿವಾಲಯ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News