ಕುವೈಟ್: ಕುಟುಂಬ ವೀಸಾ ಇನ್ನು ಪತ್ನಿ, ಮಕ್ಕಳಿಗೆ ಮಾತ್ರ

Update: 2017-05-27 10:36 GMT

ಕುವೈಟ್ ಸಿಟಿ,ಮೇ 27: 22ನೆ ನಂಬರಿನ ಕುಟುಂಬ ವೀಸಾವನ್ನು ಪತ್ನಿಮಕ್ಕಳಿಗೆ ಮಾತ್ರ ಸೀಮಿತಗೊಳಿಸಿ ಎಂದು ಕುವೈಟ್ ಸರಕಾರ ಆದೇಶ ಹೊರಡಿಸಿದೆ. ಗೃಹಸಚಿವಾಲಯದ ರೆಸಿಡೆನ್ಶಿಯನ್-ಪಾಸ್‌ಪೋರ್ಟ್ ಅಂಡರ್ ಸೆಕ್ರಟರಿ ಮೇಜರ್ ಜನರಲ್ ಶೇಖ್ ಮಾಸಿನ್ ಅಲ್ ಜರ್ರಾಹ್ ಈ ಸಂಬಂಧ ಆದೇಶವನ್ನು ಹೊರಡಿಸಿದ್ದು, ಇನ್ನುಮುಂದೆ ಕುವೈಟ್ ವಿದೇಶಿ ಉದ್ಯೋಗಿಗಳಿಗೆ ತಂದೆತಾಯಿ, ಸಹೋದರ-ಸಹೋದರಿಯರು ಮುಂತಾದ ನಿಕಟ ಬಂಧುಗಳನ್ನು ಕುಟುಂಬ ವೀಸಾದಲ್ಲಿ ಕರೆಯಿಸಿಕೊಳ್ಳಲು ಸಾಧ್ಯವಿಲ್ಲದಂತಾಗಿದೆ.

ಈವರೆಗೂ ಹೆತ್ತವರು, ಸಹೋದರರನ್ನು ಕುಟುಂಬ ವೀಸಾದಲ್ಲಿ ಕರೆಯಿಸಿಕೊಳ್ಳುವ ಅವಕಾಶವಿತ್ತು. ಹೀಗೆ ಕುವೈಟ್‌ಗೆ ಬಂದಿರುವ 11,500 ಮಂದಿ ಈ ಕಾನೂನಿನ ವ್ಯಾಪ್ತಿಗೆ ಒಳಪಡಲಿರುವರು. ಅವರ ಕುಟುಂಬ ವೀಸಾ ನವೀಕರಿಸುವುದಿಲ್ಲ. ಇವರನ್ನು ಪ್ರತ್ಯೇಕ ಬ್ಲಾಕ್ ಆಗಿ ಪರಿಗಣಿಸಿ ಪಾಸ್‌ಪಾರ್ಟ್‌ನಲ್ಲಿ ದಾಖಲಿಸಲಾಗುವುದು. ಕುಟುಂಬ ವೀಸಾವಧಿ ಮುಗಿದವರು ಕೂಡಲೆ ಸಂಬಂಧಿಸಿದ ಕಚೇರಿಯನ್ನು ಸಂಪರ್ಕಿಸಿ ಮುಂದಿನ ಕ್ರಮಕ್ಕೆ ಅನುವುಮಾಡಿಕೊಡಬೇಕು. ಕುಟುಂಬ ವೀಸಾ ಮುಗಿದವರು ಊರಿಗೆ ಹೋಗಲು ಸೌಕರ್ಯವಾಗುವಂತೆ ಒಂದು ತಿಂಗಳ ತಾತ್ಕಾಲಿಕ ಇಖಾಮ ನೀಡಲಾಗುವುದು. ಕಾನೂನು ಜಾರಿಗೆ ಬಂದೊಡನೆ ಭಾರತೀಯರ ಸಹಿತ ವಿದೇಶಿಯರಿಗೆ ಪತ್ನಿಮಕ್ಕಳನ್ನು ಹೊರತುಪಡಿಸಿ ಬೇರೆಯಾರನ್ನು ಕುಟುಂಬ ವೀಸಾದಲ್ಲಿ ಕುವೈಟಿಗೆ ಕರೆಸಿಕೊಳ್ಳಲು ಅಸಾಧ್ಯವಾಗಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News