ಸೌದಿ ದೊರೆಯಿಂದ ಕ್ಷಮಾದಾನ : ರಮಝಾನ್ ಮೊದಲ ದಿವಸ 1,664 ಕೈದಿಗಳ ಬಿಡುಗಡೆ

Update: 2017-05-28 08:11 GMT

ರಿಯಾದ್, ಮೇ 28: ಸೌದಿ ಅರೇಬಿಯದಲ್ಲಿ ರಮಝಾನ್‌ನ ಮೊದಲ ದಿನದಲ್ಲಿ 1664 ಮಂದಿ ಕೈದಿಗಳನ್ನು ಬಿಡುಗಡೆಗೊಳಿಸಲಾಗಿದೆ. "ದೊರೆಕ್ಷಮಾಧಾನ" ಕಾರ್ಯಕ್ರಮದ ಅಡಿಯಲ್ಲಿ ಈ ಕ್ರಮ ಜಾರಿಗೊಳಿಸಲಾಗಿದೆ. ಗೃಹಸಚಿವ ಹಾಗೂ ದೊರೆಯ ಉತ್ತಾರಾಧಿಕಾರಿ ಅಮೀರ್ ಮುಹಮ್ಮದ್ ಬಿನ್ ನಾಯಿಫ್ ಕೈದಿಗಳ ಬಿಡುಗಡೆಗೆ ಆದೇಶ ನೀಡಿದರು.

ಜೈಲಿನಿಂದ ವಿದೇಶಿಕೈದಿಗಳು ಮತ್ತು ಸ್ವದೇಶಿಕೈದಿಗಳು ಬಿಡುಗಡೆ ಗೊಳ್ಳಲಿದ್ದಾರೆ. ಮುಂದಿನ ದಿನಗಳಲ್ಲಿ ಕೂಡಾ ಕೈದಿಗಳ ಬಿಡುಗಡೆ ಆಗಲಿದೆ, ದೊರೆಯ ಕರುಣೆಗೆ ಅರ್ಹರಾದ ಎಲ್ಲಕೈದಿಗಳನ್ನು ಬಿಡುಗಡೆಗೊಳಿಸಲಾಗುವುದೆಂದು ಜೈಲುಗಳ ಮುಖ್ಯಸ್ಥ ಮೇಜರ್ ಜನರಲ್ ಇಬ್ರಾಹೀಂ ಬಿನ್ ಮುಹಮ್ಮದ್ ಅಲ್‌ಹಂಸಿ ಹೇಳಿದ್ದಾರೆ.

1664 ಕೈದಿಗಳು ದೇಶದ ವಿವಿಧ ಕಡೆಗಳಿಂದ ರಮಝಾನ್‌ನ ಮೊದಲ ದಿವಸ ಬಿಡುಗಡೆಗೊಳಿಸಲಾಗಿದೆ.ಸಾಮಾನ್ಯ ಅಪರಾಧಗಳಿಗೆ ಶಿಕ್ಷೆಗೊಳಗಾಗಿದ್ದ, ವ್ಯಕ್ತಿಹಕ್ಕುಗಳಿಗೆ ಸಂಬಂಧವಿಲ್ಲದ ಕೈದಿಗಳು ದೊರೆಯ ಕ್ಷಮಾದಾನದಡಿಯಲ್ಲಿ ಬಿಡುಗಡೆಗೊಂಡಿದ್ದಾರೆ ಎಂದು ಇಬ್ರಾಹೀಂ ಬಿನ್ ಮುಹಮ್ಮದ್ ಅಲ್‌ಹಂಸಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News