ತೀವ್ರ ಉಷ್ಣತೆಯ ನಡುವೆಯೂ ಮದೀನಾದ ಚಾರಿತ್ರಿಕ ಸ್ಥಳಗಳಿಗೆ ಹೆಚ್ಚಿನ ಸಂಖ್ಯೆಯ ಯಾತ್ರಿಕರ ಭೇಟಿ

Update: 2017-06-02 16:10 GMT

ಮದೀನಾ, ಜೂ. 2: ರಮಝಾನ್ ಅವಧಿಯಲ್ಲಿ ಮದೀನಾ ಮತ್ತು ಸುತ್ತಮುತ್ತಲ ಪ್ರವಾಸಿ ಸ್ಥಳಗಳಿಗೆ ಭೇಟಿ ನೀಡುವ ಯಾತ್ರಿಕರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ.

 ಹಗಲು ಹೊತ್ತಿನಲ್ಲಿ ಉಷ್ಣತೆ 50 ಡಿಗ್ರಿ ತಲುಪಿದರೂ ಯಾತ್ರಿಕರ ಉತ್ಸಾಹ ಕುಂದಿಲ್ಲ. ಕ್ಯೂಬ, ಕಿಬ್ಲಟಯನ್, ಅಲ್-ಖಂದಕ್, ಅಲ್-ಘಮಾಮ ಮತ್ತು ಅಲ್-ಇಜಾಬ ಮಸೀದಿಗಳಿಗೆ ಯಾತ್ರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಿದ್ದಾರೆ.

ಅದೇ ವೇಳೆ, ಉಹುದ್ ಹುತಾತ್ಮರ ಚೌಕ ಮತ್ತು ದೊರೆ ಫಾಹದ್ ಪವಿತ್ರ ಕುರ್‌ಆನ್ ಮುದ್ರಣ ಆವರಣಕ್ಕೂ ಜನರು ಭೇಟಿ ನೀಡುತ್ತಿದ್ದಾರೆ.

ಮದೀನಾದ ಪ್ರವಾದಿ ಮಸೀದಿಯ ಬಳಿಕ ಜನರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುವ ಇನ್ನೊಂದು ಸ್ಥಳವೆಂದರೆ ಕ್ಯೂಬ ಮಸೀದಿ.

ಮದೀನಾದ ಅತ್ಯಂತ ದೊಡ್ಡ ಮಸೀದಿ ಎಂಬುದಾಗಿ ಪರಿಗಣಿಸಲಾಗಿರುವ ಸೈಯದ್ ಅಲ್-ಶುಹಾದ ಮಸೀದಿಯಲ್ಲಿ 15,000 ಮಂದಿ ಏಕಕಾಲದಲ್ಲಿ ಪ್ರಾರ್ಥನೆ ಸಲ್ಲಿಸಬಹುದಾಗಿದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News