×
Ad

ಜಿದ್ದಾ ವಿಮಾನ ನಿಲ್ದಾಣಕ್ಕೆ 73 ಲಕ್ಷ ಯಾತ್ರಿಗಳ ಆಗಮನ

Update: 2017-06-03 18:36 IST

ಜಿದ್ದಾ, ಜೂ. 3: ಪ್ರಸಕ್ತ ಉಮ್ರಾ ಋತುವಿನ ಆರಂಭದಿಂದ ಶುಕ್ರವಾರದವರೆಗೆ ಇಲ್ಲಿನ ಕಿಂಗ್ ಅಬ್ದುಲಝೀಝ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಹಜ್ ಮತ್ತು ಉಮ್ರಾ ಟರ್ಮಿನಲ್‌ಗಳ ಮೂಲಕ ಸುಮಾರು 73 ಲಕ್ಷ ಉಮ್ರಾ ಯಾತ್ರಿಕರು ಆಗಮಿಸಿದ್ದಾರೆ ಹಾಗೂ ನಿರ್ಗಮಿಸಿದ್ದಾರೆ ಎಂದು ವಿಮಾನ ನಿಲ್ದಾಣ ಬಿಡುಗಡೆ ಮಾಡಿದ ಅಂಕಿಅಂಶಗಳು ತಿಳಿಸಿವೆ.

ಪ್ರಸಕ್ತ ರಮಝಾನ್ ದಿನಗಳಲ್ಲಿ ಉಮ್ರಾ ಯಾತ್ರಿಕರ ಸಂಖ್ಯೆ ಗಣನೀಯವಾಗಿ ಏರುವ ನಿರೀಕ್ಷೆಯಿದೆ. ಯಾತ್ರಿಕರನ್ನು ಸೌದಿ ಅರೇಬಿಯಕ್ಕೆ ಕರೆತರಲು ವಿವಿಧ ವಿಮಾನಯಾನ ಸಂಸ್ಥೆಗಳು ವಿವಿಧ ದೇಶಗಳಿಗೆ ಹಾರಾಟಗಳನ್ನು ಏರ್ಪಡಿಸಿವೆ.

ವಿಮಾನ ನಿಲ್ದಾಣ ಆಡಳಿತವು ಈ ವರ್ಷ ರಮಝಾನ್‌ಗೆ ಮುಂಚಿತವಾಗಿಯೇ ಸಿದ್ಧತೆಗಳನ್ನು ಆರಂಭಿಸಿದೆ. ಪ್ರಯಾಣಿಕ ಲಾಂಜ್‌ಗಳಿಗೆ ಸೂಕ್ತ ಸೌಲಭ್ಯಗಳನ್ನು ಒದಗಿಸಿದೆ, ನಿರ್ವಹಣಾ ಕಾರ್ಯಗಳನ್ನು ಕೈಗೆತ್ತಿಕೊಂಡಿದೆ ಹಾಗೂ ಲಗೇಜ್ ಕನ್ವೇಯರ್‌ಗಳು ಮತ್ತು ಭದ್ರತಾ ದ್ವಾರಗಳ ತಪಾಸಣೆ ನಡೆಸಿದೆ ಎಂದು ವಿಮಾನ ನಿಲ್ದಾಣದ ಮಹಾ ನಿರ್ದೇಶಕ ಅಬ್ದುಲ್ಲಾ ಬಿನ್ ಮಸದ್ ಅಲ್ ರೈಮಿ ತಿಳಿಸಿದರು.

ಯಾತ್ರಿಕರಿಗೆ ನೀಡಬೇಕಾಗಿರುವ ಭದ್ರತೆ, ಸುರಕ್ಷತೆ ಮತ್ತು ನೆಮ್ಮದಿಯನ್ನು ಗಮನದಲ್ಲಿಟ್ಟುಕೊಂಡು ಈ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News