ಉಗ್ರರನ್ನು ಒಯ್ಯುತ್ತಿದ್ದ ವಾಹನ ವಶಕ್ಕೆ

Update: 2017-06-03 18:00 GMT

ಜಿದ್ದಾ, ಜೂ. 3: ಭಯೋತ್ಪಾದಕರು, ಶಸ್ತ್ರಾಸ್ತ್ರಗಳು ಮತ್ತು ಸ್ಫೋಟಕಗಳನ್ನು ಸಾಗಿಸುತ್ತಿದ್ದ ಕಳವುಗೈಯಲಾದ ವಾಹನವೊಂದನ್ನು ಕಾತಿಫ್ ಪ್ರಾಂತದ ಪೊಲೀಸರು ಅವಶಕ್ಕೆ ತೆಗೆದುಕೊಂಡಿದ್ದಾರೆ ಎಂದು ಸೌದಿ ಅರೇಬಿಯದ ಆಂತರಿಕ ಸಚಿವಾಲಯದ ವಕ್ತಾರ ಮೇಜರ್ ಜನರಲ್ ಮನ್ಸೂರ್ ಅಲ್ ತುರ್ಕಿ ಹೇಳಿದ್ದಾರೆ.

ಕಾತಿಫ್‌ನಲ್ಲಿ ಸಾರ್ವಜನಿಕ ಭದ್ರತೆ, ಅಮಾಯಕ ಜೀವಗಳು ಮತ್ತು ಸೊತ್ತುಗಳಿಗೆ ಬೆದರಿಕೆಯಾಗಿರುವ ಭಯೋತ್ಪಾದಕ ಮತ್ತು ಕ್ರಿಮಿನಲ್ ಗುಂಪುಗಳ ಚಟುವಟಿಕೆಗಳ ಮೇಲೆ ಭದ್ರತಾ ಸಂಸ್ಥೆಗಳು ನಿಗಾ ಇಟ್ಟಿವೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News