×
Ad

ಕತರ್‌ಗೆ ಸಹಾನುಭೂತಿ: 15 ವರ್ಷ ಜೈಲೇ ಗತಿ !

Update: 2017-06-07 19:33 IST

ದುಬೈ, ಜೂ. 7: ತನ್ನ ಜನರು ಕತರ್ ಪರವಾಗಿ ಸಹಾನುಭೂತಿ ವ್ಯಕ್ತಪಡಿಸುವುದನ್ನು ಯುನೈಟೆಡ್ ಅರಬ್ ಎಮಿರೇಟ್ಸ್ ನಿಷೇಧಿಸಿದೆ ಹಾಗೂ ಇದನ್ನು ಉಲ್ಲಂಘಿಸಿದವರು 15 ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗುತ್ತಾರೆ ಎಂದು ಎಚ್ಚರಿಸಿದೆ ಎಂದು ಯುಎಇಯ ಪತ್ರಿಕೆ ‘ಗಲ್ಫ್ ನ್ಯೂಸ್’ ಮತ್ತು ಅರಬ್ ಚಾನೆಲ್ ಅಲ್-ಅರೇಬಿಯ ಬುಧವಾರ ವರದಿ ಮಾಡಿವೆ.

ಕತರ್ ‘ಭಯೋತ್ಪಾದಕರಿಗೆ ಬೆಂಬಲ ನೀಡುವುದು ಮತ್ತು ಇರಾನ್ ಜೊತೆಗೆ ವ್ಯವಹರಿಸುವುದನ್ನು’ ಆಕ್ಷೇಪಿಸಿ ಸೌದಿ ಅರೇಬಿಯ, ಯುಎಇ, ಬಹರೈನ್, ಈಜಿಪ್ಟ್, ಯಮನ್ ಮತ್ತು ಇತರ ಕೆಲವು ದೇಶಗಳು ಎರಡು ದಿನಗಳ ಹಿಂದೆ ಆ ದೇಶದೊಂದಿಗಿನ ರಾಜತಾಂತ್ರಿಕ ಸಂಬಂಧವನ್ನು ಕಡಿದುಕೊಂಡಿರುವುದನ್ನು ಸ್ಮರಿಸಬಹುದಾಗಿದೆ.

‘‘ಸಾಮಾಜಿಕ ಮಾಧ್ಯಮ ಅಥವಾ ಇತರ ಯಾವುದೇ ರೀತಿಯ ಬರಹ, ದೃಶ್ಯ ಅಥವಾ ಮಾತಿನ ರೂಪದಲ್ಲಿ ಕತರ್ ಪರವಾಗಿ ಸಹಾನುಭೂತಿ ಅಥವಾ ಯಾವುದೇ ರೀತಿಯ ಪಕ್ಷಪಾತಪೂರಿತ ಧೋರಣೆಯನ್ನು ಹೊಂದಿರುವವರು ಅಥವಾ ಯುಎಇಯ ನಿಲುವಿನ ಬಗ್ಗೆ ಆಕ್ಷೇಪಗಳನ್ನು ವ್ಯಕ್ತಪಡಿಸುವವರ ವಿರುದ್ಧ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು’’ ಎಂದು ಯುಎಇಯ ಅಟಾರ್ನಿ ಜನರಲ್ ಹಮದ್ ಸೈಫ್ ಅಲ್-ಶಮ್ಸಿ ಅವರನ್ನು ಉಲ್ಲೇಖಿಸಿ ‘ಗಲ್ಫ್ ನ್ಯೂಸ್’ ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News