ಹೃದಯಾಘಾತ ನಿಭಾಯಿಸಲು ಮಕ್ಕಾ ನಿವಾಸಿಗಳಿಗೆ ತರಬೇತಿ

Update: 2017-06-08 15:13 GMT

ಜಿದ್ದಾ, ಜೂ. 8: ‘ಮಕ್ಕಾ, ಸುರಕ್ಷಿತ ಹೃದಯದ ನಗರ’ ಯೋಜನೆಯನ್ನು ಜಾರಿಗೊಳಿಸುವ ತಿಳುವಳಿಕೆ ಪತ್ರವೊಂದಕ್ಕೆ ಮಕ್ಕಾ ಗವರ್ನರ್ ಹಾಗೂ ದೊರೆ ಸಲ್ಮಾನ್‌ರ ಸಲಹಾಕಾರ ರಾಜಕುಮಾರ ಖಾಲಿದ್ ಅಲ್-ಫೈಸಲ್ ಮತ್ತು ಆರೋಗ್ಯ ಸಚಿವ ತೌಫೀಕ್ ಅಲ್-ರಬಯ್ಯ ಮಂಗಳವಾರ ಸಹಿ ಹಾಕಿದರು.

ಹೃದಯಾಘಾತಕ್ಕೆ ಒಳಗಾಗುವ ಜನರಿಗೆ ತುರ್ತು ಚಿಕಿತ್ಸೆ ನೀಡುವುದು ಹೇಗೆನ್ನುವುದನ್ನು ಆರೋಗ್ಯ ಕ್ಷೇತ್ರದಿಂದ ಹೊರಗಿರುವ ನಾಗರಿಕರಿಗೆ ಕಲಿಸುವ ಯೋಜನೆ ಇದಾಗಿದೆ.

ಹಜ್ ಮತ್ತು ಉಮ್ರಾ ಋತುಗಳಲ್ಲಿ ಅತಿಥಿಗಳಿಗೆ ಸೇವೆ ನೀಡುವಲ್ಲಿ ತೊಡಗಿಕೊಂಡಿರುವ ಎಲ್ಲ ಸಂಸ್ಥೆಗಳು ಮತ್ತು ಪಕ್ಷಗಳನ್ನು ರಾಜಕುಮಾರ ಖಾಲಿದ್ ಈ ಸಂದರ್ಭದಲ್ಲಿ ಶ್ಲಾಘಿಸಿದರು.

ಈ ಯೋಜನೆಯ ಪ್ರಥಮ ಹಂತದಲ್ಲಿ ಹೊರಗೆ ಹೃದಯಾಘಾತಕ್ಕೆ ಒಳಗಾಗುವ ವ್ಯಕ್ತಿಗಳೊಂದಿಗೆ ಯಾವ ರೀತಿಯಲ್ಲಿ ವ್ಯವಹರಿಸಬೇಕು ಎಂಬ ಬಗ್ಗೆ ಸುಮಾರು 5,000 ಜನರಿಗೆ ತರಬೇತಿ ನೀಡಲಾಗುವುದು.

ಈ ನಡುವೆ, ತರಬೇತಿದಾರರು ಮತ್ತು ಅರೆವೈದ್ಯಕೀಯ ಸಿಬ್ಬಂದಿಗಳಿಗೆ ಗೊತ್ತಿರುವ ವಿವಿಧ ಸ್ಥಳಗಳಲ್ಲಿ 1,000 ಆಟೊಮೇಟಡ್ ಎಕ್ಸ್‌ಟರ್‌ನಲ್ ಡೆಫಿಬ್ರಿಲೇಟರ್ (ಎಇಡಿ)ಗಳನ್ನು ವಿತರಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News