ದುಬೈ: ನೂರುಲ್ ಹುದಾ ವತಿಯಿಂದ ಇಫ್ತಾರ್ ಸಂಗಮ

Update: 2017-06-10 17:08 GMT

ದುಬೈ, ಜೂ.10: ನೂರುಲ್ ಹುದಾ ಇಸ್ಲಾಮಿಕ್ ಅಕಾಡಮಿ ಮಾಡನ್ನೂರು ಇದರ ಯು.ಎ.ಇ ರಾಷ್ಟ್ರೀಯ ಸಮಿತಿಯ ಅದೀನದಲ್ಲಿ ನೂರುಲ್ ಹುದಾ ಹಿತೈಷಿಗಳ ಇಫ್ತಾರ್ ಸಂಗಮ ಪರ್ಲ್ ಕ್ರೀಕ್ ಹೋಟೆಲ್ ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮವು  ನೂರುಲ್ ಹುದಾ ಯು.ಎ.ಇ ರಾಷ್ಟ್ರೀಯ ಸಮಿತಿಯ ಗೌರವ ಅಧ್ಯಕ್ಷ ಅಸ್ಗರ್ ಅಲೀ ತಂಙಲ್ ದುವಾದೊಂದಿಗೆ ಆರಂಭಿಸಿದರು.
 

ನೂರುಲ್ ಹುದಾ ಯು.ಎ.ಇ ರಾಷ್ಟ್ರೀಯ ಸಮಿತಿಯ ಅಧ್ಯಕ್ಷ ಶರೀಫ್ ಕಾವು ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮಕ್ಕೆ ನೂರುಲ್ ಹುದಾ ದುಬೈ ಸಮಿತಿಯ ಅಧ್ಯಕ್ಷ ಸುಲೈಮಾನ್ ಮೌಲವಿ ಕಲ್ಲೆಗ ಸ್ವಾಗತಿಸಿದರು.

ಕಾರ್ಯಕ್ರಮದಲ್ಲಿ ಆರ್.ಎಮ್. ಗ್ರೂಪ್ ಕಂಪನಿಯ ಚೇರ್ಮಾನ್ ಅಬ್ದುಲ್ ಖಾದರ್ ಹಾಜಿ ಅಂಚಿನಡ್ಕ ಉದ್ಘಾಟಿಸಿದರು.
ನೂರುಲ್ ಹುದಾ ಅಬುಧಾಬಿ ರಾಜ್ಯ ಸಮಿತಿಯ ಅಧ್ಯಕ್ಷ ಅಶ್ರಫ್ PK ಪಳ್ಳಂಗೋಡು ನೂರುಲ್ ಹುದಾ ಇಸ್ಲಾಮಿಕ್ ಅಕಾಡಮಿಯ ಪರಿಚಯ, ಉದ್ದೇಶ ಮತ್ತು ಕರ್ನಾಟಕದಲ್ಲಿ ಇದರ ಅಗತ್ಯತೆಯನ್ನು ವಿವರಿಸಿದರು.

ಕಾರ್ಯಕ್ರಮದ ಮುಖ್ಯ ಅತಿಥಿ ಎಸ್.ಕೆ.ಎಸ್.ಎಸ್ ಯು.ಎ.ಇ ಇದರ ಅಧ್ಯಕ್ಷ ಸಯ್ಯದ್ ಸುಹೈಬ್ ತಂಙಲ್ ಮಾತನಾಡಿ ದಕ್ಷಿಣ ಭಾರತವು ಧಾರ್ಮಿಕ ಶಿಕ್ಷಣ ಕಲಿಕೆಯ ಪದ್ಧತಿಗಳಿಂದ ಸಂಪನ್ನಗೊಂಡಿದೆ. ಉತ್ತರ ಭಾರತದಲ್ಲಿ ಪ್ರಖ್ಯಾತ ಉಲೆಮಾಗಳಿದ್ದರೂ ಇಸ್ಲಾಮಿನ ಸಂದೇಶವನ್ನು ಜನರಿಗೆ ತಲುಪಿಸುವ ಪದ್ಧತಿಗಳು ಮತ್ತು ವ್ಯವಸ್ಥೆಗಳು ಇಲ್ಲದಿರುವುದರಿಂದ ಆ ಪ್ರದೇಶಗಳ ಜನರು ಶಿಕ್ಷಣದಿಂದ ವಂಚಿತರಾಗಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಅಬ್ದುಲ್ ರಹ್ಮಾನ್ ಜಲಾಲುದ್ದೀನ್ ಬುರ್ಹಾನಿ ಉಸ್ತಾದ್ ರಮಝಾನ್ ವೃತ ಅನುಸರಿಸುವ ರೀತಿ ನೀತಿಗಳ ಬಗ್ಗೆ ವಿವರಿಸಿದರು.

ದುಬೈ ಸರ್ಕಾರ, ದುಬೈ ಸುನ್ನೀ ಸೆಂಟರ್ ಸಹಭಾಗಿತ್ವದಲ್ಲಿ ನಡೆಸಲಿರುವ  21 ನೇ ದುಬೈ ಅಂತರಾಷ್ಟ್ರೀಯ ಹೋಲೀ ಕುರ್ಆನ್ ಅವಾರ್ಡ್ ಇದರ ಮುಖ್ಯ ಅತಿಥಿಯಾಗಿ ಸಮಸ್ತ ಅಧ್ಯಕ್ಷರು ಶೈಖುನಾ ಸಯ್ಯದ್ ಜಿಪ್ರೀ ಮುತ್ತುಕೋಯ ತಂಙಲ್ ಭಾಗವಹಿಸಲಿರುವ ಕಾರ್ಯಕ್ರಮದ ಪೂರ್ಣ ಮಾಹಿತಿಯನ್ನು ಸುನ್ನೀ ಸೆಂಟರ್ ಪ್ರಧಾನ ಕಾರ್ಯದರ್ಶಿ  ಶೌಖತ್ತ್ ಅಲೀ ಹುದವಿ ನೀಡಿದರು.

ನೂರುಲ್ ಹುದಾ ದುಬೈ ಸಮಿತಿಯ ಲೆಕ್ಕ ಪರಿಶೋಧಕ ಅಶ್ರಫ್ ಪರ್ಲಡ್ಕ ಕಾರ್ಯಕ್ರಮ ನಿರೂಪಿಸಿದರು. ಇಫ್ತಾರ್ ಸಮಿತಿಯ ಚೇರ್ಮೇನ್ ಆಸಿಫ್ ಮರೀಲ್ ಮತ್ತು ಪ್ರಧಾನ ಕಾರ್ಯದರ್ಶಿ ಅನ್ವರ್ ಮಣಿಲ ವಂದಿಸಿದರು.

ವೇದಿಕೆಯಲ್ಲಿ ದುಬೈ ಪೊಲೀಸ್ ಮುಖ್ಯಸ್ಥ ಮೇಜರ್ ಇಸ್ಮಾಯಿಲ್ ಅಲೀ ಅಲ್ ರಹ್ಮಾನ್, ದುಬೈ ಸುನ್ನಿ ಸೆಂಟರ್ ಪ್ರಧಾನ ಕಾರ್ಯದರ್ಶಿ ಶೌಕತ್ ಅಲೀ ಹುದವಿ, ನೂರುಲ್ ಹುದಾ ಯು.ಎ.ಇ ಸಮಿತಿಯ ಧಾರ್ಮಿಕ ಸಲಹೆಗಾರ ಅನ್ಸಾರ್ ಹುದವಿ ಶಿವಮೊಗ್ಗ, ಕೋಶಾಧಿಕಾರಿ ಅಶ್ರಫ್ ಯಾಕೂತ್ ನೆಕ್ಕರೆ, ನೂರುಲ್ ಹುದಾ ಶಾರ್ಜಾ ರಾಜ್ಯ ಸಮಿತಿಯ ಅಧ್ಯಕ್ಷ ಅಶ್ರಫ್ ಗಾಳಿಮುಖ, ಕರ್ನಾಟಕ ಇಸ್ಲಾಮಿಕ್ ಸೆಂಟರ್ ಕೇಂದ್ರ ಸಮಿತಿ ಅಧ್ಯಕ್ಷ ಮೊಯ್ದಿನ್ ಕುಟ್ಟಿ, ಹಾಜಿ ದಿಬ್ಬ, ಕೆ.ಐ.ಸಿ ದುಬೈ ಸಮಿತಿಯ ಅಧ್ಯಕ್ಷ ಅಶ್ರಫ್ ಖಾನ್ ಮಾಂತೂರು, ಶಂಸುಲ್ ಉಲಮಾ ಅರಬಿಕ್ ಕಾಲೇಜು ತೋಡಾರು ಇದರ ಯು.ಎ.ಇ ಸಮಿತಿ ಅಧ್ಯಕ್ಷ ಅಬ್ದುಲ್ ಖಾದರ್ ಬೈತಡ್ಕ ಉಪಸ್ತಿತರಿದ್ದರು.

ಕಾರ್ಯಕ್ರಮದಲ್ಲಿ ನೂರುಲ್ ಹುದಾ ಯು.ಎ.ಇ ಸಮಿತಿ, ದುಬೈ, ಅಬುಧಾಬಿ, ಶಾರ್ಜಾ ರಾಜ್ಯ ಸಮಿತಿ ಪದಾಧಿಕಾರಿಗಳು ಹಾಗೂ ಎಲ್ಲಾ ಕ್ಲಸ್ಟರ್ ಪದಾಧಿಕಾರಿಗಳು, ಸದಸ್ಯರು ಭಾಗವಹಿಸಿದ್ದರು.

Writer - ಅಝೀಝ್ ಸೋಂಪಾಡಿ

contributor

Editor - ಅಝೀಝ್ ಸೋಂಪಾಡಿ

contributor

Similar News