ಕತರ್‌ಗೆ ಕಾನೂನು ಸಲಹೆಗಾರನಾಗಿ ಅಮೆರಿಕದ ಮಾಜಿ ಅಟಾರ್ನಿ ಜನರಲ್ ಆ್ಯಶ್‌ಕ್ರಾಫ್ಟ್ ನೇಮಕ

Update: 2017-06-11 15:15 GMT

ದೋಹಾ, ಜೂ.11: ತಾನು ಭಯೋತ್ಪಾದನೆಯನ್ನು ಉತ್ತೇಜಿಸುತ್ತಿದ್ದೇನೆಂಬ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆರೋಪವನ್ನು ತಳ್ಳಿಹಾಕುವ ಪ್ರಯತ್ನವಾಗಿ ಕತರ್, ಇದೀಗ ಅಧ್ಯಕ್ಷ ಜಾರ್ಜ್ ಬುಷ್ ಆಡಳಿತದಲ್ಲಿ ಅಮೆರಿಕದ ಅಟಾರ್ನಿ ಜನರಲ್ ಆಗಿದ್ದ ಜಾನ್ ಆ್ಯಶ್‌ಕ್ರಾಫ್ಟ್ ಅವರನ್ನು ತನ್ನ ಕಾನೂನುಸಲಹೆಗಾರನಾಗಿ ನೇಮಿಸಿಕೊಂಡಿದೆ.

    ಜಾಗತಿಕ ಭಯೋತ್ಪಾದನೆಯ ವಿರುದ್ಧ ಹೋರಾಟದಲ್ಲಿ ತಾನು ನಡೆಸುತ್ತಿರುವ ಪ್ರಯತ್ನಗಳನ್ನು ದೃಢಪಡಿಸಲು ಹಾಗೂ ಅಮೆರಿಕದ ಖಜಾನೆ ನಿಯಮಗಳು ಸೇರಿದಂತೆ ಹಣಕಾಸು ಕಾಯ್ದೆಗಳಿಗೆ ಬದ್ಧವಾಗಿ ನಡೆದುಕೊಳ್ಳುವ ತನ್ನ ಪ್ರಯತ್ನವಾಗಿ ಅದು ಈ ಕ್ರಮವನ್ನು ಕೈಗೊಂಡಿದೆ. ಇದಕ್ಕಾಗಿ ಕತರ್ 90ದಿನಗಳ ಅವಧಿಗೆ ಆ್ಯಶ್‌ಕ್ರಾಫ್ಟ್ ಅವರ ಕಾನೂನು ಸಂಸ್ಥೆಗೆ 2.5 ದಶಲಕ್ಷ ಡಾಲರ್‌ಗಳನ್ನು ಸಂಭಾವನೆಯಾಗಿ ಪಾವತಿಸಲಿದೆ.

 ಭಯೋತ್ಪಾದನೆಯ ವಿರುದ್ಧ ಹೋರಾಡಲು ಕತರ್ ನಡೆಸುತ್ತಿರುವ ಪ್ರಯತ್ನಗಳನ್ನು ಹಾಗೂ ಈ ನಿಟ್ಟಿನಲ್ಲಿ ಅದು ಹೊಂದಿರುವ ಗುರಿಗಳ ಬಗ್ಗೆ ಸಂಸ್ಥೆಯು ಜಾಗತಿಕ ಮಟ್ಟದಲ್ಲಿ ಮಾಧ್ಯಮಗಳಲ್ಲಿ ಅರಿವು ಮೂಡಿಸಲಿದೆ ಹಾಗೂ ರಾಜತಾಂತ್ರಿಕ ಬಿಕ್ಕಟ್ಟಿಗೆ ಸಂಬಂಧಿಸಿ ಕತರ್ ಆಡಳಿತಕ್ಕೆ ಸಲಹೆ,ಸೂಚನೆಗಳನ್ನು ನೀಡಲಿದೆಯೆದಂು ಆ್ಯಶ್‌ಕ್ರಾಫ್ಟ್ ಅವರ ಸಂಸ್ಥೆಯ ಪಾಲುದಾರನಾದ ಮೈಕಲ್ ಸುಲಿವಾನ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News