×
Ad

ಯುಎಇ, ಸೌದಿ ನಡುವಿನ ವಿಮಾನ ಹಾರಾಟ ಹೆಚ್ಚಳ

Update: 2017-06-13 17:40 IST

ಅಬುಧಾಬಿ, ಜೂ. 13: ಯುಎಇ ಮತ್ತು ಸೌದಿ ಅರೇಬಿಯಗಳ ನಡುವಿನ ವಾರದ ವಿಮಾನ ಹಾರಾಟಗಳ ಸಂಖ್ಯೆಯನ್ನು 86ಕ್ಕೆ ಹೆಚ್ಚಿಸುವ ತಿಳುವಳಿಕೆ ಪತ್ರವೊಂದಕ್ಕೆ ಯುಎಇ ಜನರಲ್ ಸಿವಿಲ್ ಏವಿಯೇಶನ್ ಅಥಾರಿಟಿ (ಜಿಸಿಎಎ) ಮತ್ತು ಸೌದಿ ಜನರಲ್ ಅಥಾರಿಟಿ ಆಫ್ ಸಿವಿಲ್ ಏವಿಯೇಶನ್ (ಜಿಎಸಿಎ) ಸಹಿ ಹಾಕಿವೆ.

ವಾಯು ಸಾರಿಗೆ ಬಗ್ಗೆ ಚರ್ಚಿಸಲು ಹಾಗೂ ಉಭಯ ದೇಶಗಳ ನಡುವಿನ ಸಹಕಾರವನ್ನು ಹೆಚ್ಚಿಸಲು ರವಿವಾರ ರಿಯಾದ್‌ನಲ್ಲಿ ಸಭೆ ನಡೆಯಿತು ಎಂದು ಜಿಸಿಎಎ ಮಹಾ ನಿರ್ದೇಶಕ ಸೈಫ್ ಅಲ್ ಸುವೈದಿ ತಿಳಿಸಿದರು.

ಎರಡು ದೇಶಗಳ ನಾಗರಿಕ ವಾಯುಯಾನ ನಿಯಂತ್ರಕರ ನಡುವಿನ ಬಾಂಧವ್ಯ ಸದೃಢವಾಗಿದೆ ಹಾಗೂ ಬೆಳೆಯುತ್ತಿದೆ ಎಂದು ಅವರು ಹೇಳಿದರು.

ಉಭಯ ವಿಮಾನಯಾನ ಸಂಸ್ಥೆಗಳ ಸಿಇಒಗಳು ಸಭೆಯಲ್ಲಿ ಭಾಗವಹಿಸಿದ್ದರು ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News