ಯುಎಇ ಚರ್ಚ್‌ನಲ್ಲಿ ಮಗ್ರಿಬ್ ಪ್ರಾರ್ಥನೆ, ಇಫ್ತಾರ್ ಕೂಟ !

Update: 2017-06-14 16:14 GMT

ಅಬುಧಾಬಿ, ಜೂ. 14: ಯುಎಇಯ ಅಲ್-ಐನ್‌ನಲ್ಲಿರುವ ಕ್ಯಾಥೆಡ್ರಲ್ ತನ್ನ ಪ್ಯಾರಿಶ್ ಹಾಲ್‌ನಲ್ಲಿ ಮಘ್ರಿಬ್ ಪ್ರಾರ್ಥನೆ ಮತ್ತು ಇಫ್ತಾರ್ ಭೋಜನಕ್ಕೆ ಅವಕಾಶ ಮಾಡಿಕೊಟ್ಟಿದೆ.

ಅಲ್ ಐನ್‌ನಲ್ಲಿರುವ ಸೇಂಟ್ ಜಾರ್ಜ್ ಜಾಕೊಬೈಟ್ ಸಿರಿಯನ್ ಆರ್ಥೊಡಾಕ್ಸ್ ಸಿಂಹಾಸನ ಕ್ಯಾಥೆಡ್ರಲ್ನ ಪ್ಯಾರಿಶ್‌ಹಾಲ್‌ನಲ್ಲಿ ಕಳೆದ ಶುಕ್ರವಾರ ಕುರ್‌ಆನ್‌ನ ಸೂಕ್ತಿಗಳು ಕೇಳಿಬಂದವು. ಇಮಾಮ್ ಒಬ್ಬರ ನೇತೃತ್ವದಲ್ಲಿ ಮಗ್ರಿಬ್ ಪ್ರಾರ್ಥನೆ ನಡೆಯಿತು.

ಅಲ್ ಖ್ರೇರ್ ವಲಯದ ಕಾರ್ಮಿಕ ಕಾಲನಿಗಳ 250 ಕಾರ್ಮಿಕರನ್ನು ಇಫ್ತಾರ್‌ಗಾಗಿ ಕ್ಯಾಥೆಡ್ರಲ್ ಆಹ್ವಾನಿಸಿತ್ತು.

ಯುಎಇ ನಾಯಕತ್ವದಿಂದ ಸ್ಫೂರ್ತಿ ಪಡೆದು ಪ್ಯಾರಿಶ್ ಆಡಳಿತ ಸಮಿತಿಯು ಇಂಥ ಕ್ರಮವನ್ನು ತೆಗೆದುಕೊಂಡಿತು ಎಂದು ಫಾದರ್ ಪ್ರಿನ್ಸ್ ಪೊನ್ನಚೆನ್ ಹೇಳಿದರು.

‘‘ ‘ದಾನ ಮಾಡುವ ವರ್ಷ’ದಲ್ಲಿ ಹಲವಾರು ಸಾಮಾಜಿಕ ಕಲ್ಯಾಣ ಕಾರ್ಯಕ್ರಮಗಳನ್ನು ಕೈಗೆತ್ತಿಕೊಳ್ಳುವ ಮೂಲಕ ಯುಎಇ ಅಧ್ಯಕ್ಷ ಶೇಖ್ ಖಲೀಫ ಬಿನ್ ಝಾಯೇದ್ ಅಲ್ ನಹ್ಯಾನ್ ನಮಗೆ ದಾರಿ ತೋರಿಸಿದ್ದಾರೆ. ಇದು ಶಾಂತಿ ಮತ್ತು ಧಾರ್ಮಿಕ ಸಾಮರಸ್ಯದ ನಿಟ್ಟಿನಲ್ಲಿ ತೆಗೆದುಕೊಂಡ ಮೊದಲ ಹೆಜ್ಜೆಯಾಗಿದೆ’’ ಎಂದು ಪೊನ್ನಚೆನ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News