ದುಬೈ: ವಿದ್ಯುತ್, ನೀರು ಸಂಪರ್ಕ ಪಡೆಯಲು ‘ಇಜಾರಿ’ ಕಡ್ಡಾಯ

Update: 2017-06-14 17:28 GMT

ದುಬೈ, ಜೂ. 14: ದುಬೈಯಲ್ಲಿ ವಿದ್ಯುತ್ ಮತ್ತು ನೀರು ಸಂಪರ್ಕಗಳನ್ನು ಪಡೆಯಲು ‘ಇಜಾರಿ’ ವಾಸ್ತವ್ಯ ಗುತ್ತಿಗೆಯನ್ನು ಹೊಂದುವುದು ಜುಲೈ ಒಂದರಿಂದ ಕಡ್ಡಾಯವಾಗಿದೆ ಎಂದು ದುಬೈ ವಿದ್ಯುತ್ ಮತ್ತು ಜಲ ಪ್ರಾಧಿಕಾರ ಘೋಷಿಸಿದೆ.

ದುಬೈ ಜಮೀನು ಇಲಾಖೆ ಅನುಮೋದಿಸಿದ 800 ರಿಯಲ್ ಎಸ್ಟೇಟ್ ಕಚೇರಿಗಳ ಪೈಕಿ ಯಾವುದಾದರೊಂದರಲ್ಲಿ ಬಳಕೆದಾರರು ಗುತ್ತಿಗೆಯನ್ನು ನೋಂದಾಯಿಸಿದ ಕೂಡಲೇ ಅವರ ವಿದ್ಯುತ್ ಮತ್ತು ನೀರು ಸಂಪರ್ಕಗಳು ಮಂಜೂರಾಗುತ್ತವೆ. ಇದಕ್ಕಾಗಿ ಬಳಕೆದಾರರು ಪ್ರಾಧಿಕಾರದ ‘ಬಳಕೆದಾರ ಸಂತುಷ್ಟ ಕೇಂದ್ರ’ಗಳಿಗೆ ಭೇಟಿ ನೀಡಬೇಕಾಗಿಲ್ಲ.

ಬಳಕೆದಾರರ ಸಮಯ ಮತ್ತು ಶ್ರಮವನ್ನು ಉಳಿಸಲು ಪ್ರಾಧಿಕಾರವು ಈ ಕ್ರಮ ತೆಗೆದುಕೊಂಡಿದೆ.

ಇಜಾರಿ ಗುತ್ತಿಗೆಯನ್ನು ನೋಂದಾಯಿಸಿದ ತಕ್ಷಣ ಗ್ರಾಹಕರು ಪ್ರಾಧಿಕಾರದಿಂದ ಸ್ವಾಗತ ಸಂದೇಶವನ್ನು ಇಮೇಲ್ ಮತ್ತು ಎಸ್‌ಎಂಎಸ್ ಮೂಲಕ ಪಡೆಯುತ್ತಾರೆ. ಇದೇ ಸಂದರ್ಭದಲ್ಲಿ ಭದ್ರತಾ ಠೇವಣಿ ಪಾವತಿಸಲು ಅವರಿಗೆ ಒಂದು ಕೊಂಡಿಯನ್ನು ಕೊಡಲಾಗುತ್ತದೆ. ಭದ್ರತಾ ಠೇವಣಿಯನ್ನು ಆನ್‌ಲೈನ್‌ನಲ್ಲಿ ಅಥವಾ ಪ್ರಾಧಿಕಾರ ಒದಗಿಸಿರುವ ಯಾವುದಾದರೂ ಸುಧಾರಿತ ವಿಧಾನಗಳ ಮೂಲಕ ಪಾವತಿಸಿದ ಬಳಿಕ ವಿದ್ಯುತ್ ಮತ್ತು ನೀರು ಸಂಪರ್ಕಕ್ಕೆ ಚಾಲನೆ ನೀಡಲಾಗುತ್ತದೆ ಎಂದು ಪ್ರಾಧಿಕಾರದ ಆಡಳಿತ ನಿರ್ದೇಶಕ ಮತ್ತು ಸಿಇಒ ಸಯೀದ್ ಮುಹಮ್ಮದ್ ಅಲ್ ತಾಯಿರ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News