ಯುಎಇ: ಈದ್‌ಗೆ ವೇತನ ಸಹಿತ ರಜೆ

Update: 2017-06-17 14:59 GMT

ಅಬುದಾಭಿ,ಜೂ.17: ಯುಎಇನ ಎಲ್ಲಾ ಖಾಸಗಿ ವಲಯದ ಉದ್ಯೋಗಿಗಳಿಗೆ ಈದುಲ್ ಫಿತ್ರ್ ಹಬ್ಬದ ದಿನವು, ಅಧಿಕೃತ ವೇತನಸಹಿತ ರಜಾದಿನವಾಗಿರುವುದು ಎಂದು ಕಾರ್ಮಿಕ ಸಚಿವಾಲಯವು ತಿಳಿಸಿದೆ.

  ಈ ಬಗ್ಗೆ ಯುಎಇನ ಮಾನವಸಂಪನ್ಮೂಲ ಹಾಗೂ ಎಮಿರೇಟೈಸೇಶನ್ (ಸ್ವದೇಶಿಕರಣ) ಇಲಾಖೆಯ ಸಚಿವಾಲಯವು 1980ರ ಫೆಡರಲ್ ಕಾನೂನು ಸಂ. 08ರ 74ನೇ ಕಲಮನ್ನು ತಿದ್ದುಪಡಿಗೊಳಿಸಿ ಸುತ್ತೋಲೆಯೊಂದನ್ನು ಪ್ರಕಟಿಸಿದೆ. ಆ ಪ್ರಕಾರ ಶವ್ವಾಲ್ ತಿಂಗಳಿನ ಮೊದಲ ಹಾಗೂ ಎರಡನೆ ದಿನವು ಖಾಸಗಿ ವಲಯಕ್ಕೆ ರಜಾದಿನವಾಗಿರುವುದು.

    ರಂಜಾನ್ ತಿಂಗಳ ಪ್ರಯುಕ್ತ ಸಚಿವಾಲಯವು ಜಗತ್ತಿನಾದ್ಯಂತದ ಯುಎಇ ಹಾಗೂ ಅರಬ್ ಮತ್ತು ಮುಸ್ಲಿಂ ದೇಶಗಳ ಜನತೆ ಶುಭಾಶಯಗಳನ್ನು ಸಲ್ಲಿಸಿದೆ.

 ಯುಎಇನಲ್ಲಿರುವ ಫೆಡರಲ್ ಸಚಿವಾಲಯಗಳು ಹಾಗೂ ಇಲಾಖೆಗಳಿಗೆ ಈದುಲ್ ಫಿತ್ರ್ ರಜಾದಿನಗಳು ಜೂನ್ 24ರಿಂದ ಆರಂಭಗೊಳ್ಳಲಿದೆ ಮಾನವ ಸಂಪನ್ಮೂಲ ಸಚಿವಾ ತಿಳಿಸಿದೆ.
ಒಂದು ವೇಳೆ ಈದುಲ್ ಫಿತ್ರ್ ಜೂನ್ 25 ರವಿವಾರ ಆಚರಣೆಯಾದಲ್ಲಿ, ಬುಧವಾರ (ಜೂನ್.28)ರಂದು ಉದ್ಯೋಗಿಗಳು ಕೆಲಸಕ್ಕೆ ಹಾಜರಾಗಬೇಕಾಗುತ್ತದೆ.

 ಒಂದು ವೇಳೆ ಈದುಲ್ ಫಿತ್ರ್ ಜೂನ್ 26ರಂದು ಆಚರಣೆಯಾದಲ್ಲಿ ರಜಾದಿನಗಳು ಹಿಂದಿನ ಶನಿವಾರದಿಂದಲೇ ಆರಂಭಗೊಳ್ಳಲಿದ್ದು, ಜುಲೈ 2, ರವಿವಾರ ಕೆಲಸ ಪುನಾರಂಭಗೊಳ್ಳಲಿದೆ..

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News