ಅಮಾನತಾಗಿದ್ದ ಅಲ್‌ಜಝೀರಾ ಟ್ವಿಟರ್ ಮತ್ತೆ ಸಕ್ರಿಯ

Update: 2017-06-17 15:09 GMT

ದೋಹಾ,ಜೂ.17: ಸ್ವಲ್ಪ ಸಮಯದಿಂದ ಅಮಾತುಗೊಳಿಸಲಾಗಿದ್ದ ಕತರ್ ಮೂಲದ ಸುದ್ದಿವಾಹಿನಿ ಸಂಸ್ಥೆ ಅಲ್‌ಜಝೀರಾದ ಅರೇಬಿಕ್ ಭಾಷೆಯಲ್ಲಿನ ಟ್ವಿಟ್ಟರ್ ಖಾತೆ ಶನಿವಾರದಿಂದ ಕಾರ್ಯನಿರ್ವಹಿಸತೊಡಗಿದೆ ಎಂದು ಅಲ್ ಜಝೀರಾ ಅರೇಬಿಕ್‌ನ ಆಡಳಿತ ನಿರ್ದೇಶಕ ಯಾಸರ್ ಅಬು ಹಿಲಾಲ್ ದೃಢಪಡಿಸಿದ್ದಾರೆ.

ಈ ಬಗ್ಗೆ ಟ್ವಿಟರ್‌ನಿಂದ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ.

ಸೌದಿ ಆರೇಬಿಯ ಹಾಗೂ ಯುಎಇ ಸೇರಿದಂತೆ ಕೆಲವು ನೆರೆಹೊರೆಯ ದೇಶಗಳು ಕತರ್ ಜೊತೆ ರಾಜತಾಂತ್ರಿಕ ಸಂಬಂಧವನ್ನು ಕಡಿದುಕೊಂಡ ಹಿನ್ನೆಲೆಯಲ್ಲಿ ಗಲ್ಫ್ ಪ್ರದೇಶದಲ್ಲಿ ಬಿಕ್ಕಟ್ಟು ತಲೆದೋರಿದ ಕೆಲ ಸಮಯದ ಬಳಿಕ ಈ ಟ್ವಿಟರ್ ಖಾತೆ ಅಮಾನತುಗೊಳಿಸಲ್ಪಟ್ಟಿತ್ತು.

 ಅಲ್‌ಜಝೀರಾ ಟಿವಿ ವಾಹಿನಿಯು ಬಹಳ ಸಮಯದಿಂದೀಚೆಗೆ ಪ್ರಾಂತದಲ್ಲಿನ ಇತರ ದೇಶಗಳಿಂದ ಟೀಕೆಗೊಳಲಾಗಿತ್ತು. ಹಲವಾರು ಸಂದರ್ಭಗಳಲ್ಲಿ ಆ ಚಾನೆಲ್‌ನ್ನು ನಿಷೇಧಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News