ಟರ್ಕಿಯ ಸೇನಾ ನೆಲೆ ಸ್ಥಾಪನೆಗೆ ಸೌದಿ ವಿರೋಧ

Update: 2017-06-18 14:32 GMT

ಜಿದ್ದಾ (ಸೌದಿ ಅರೇಬಿಯ), ಜೂ. 18: ಕತರ್‌ನಲ್ಲಿ ನಿರ್ಮಿಸಿರುವ ಮಾದರಿಯಲ್ಲಿ ಸೌದಿ ಅರೇಬಿಯದಲ್ಲಿ ಟರ್ಕಿಯ ಸೇನಾ ನೆಲೆ ಸ್ಥಾಪನೆ ಸ್ವಾಗತಾರ್ಹವಲ್ಲ ಹಾಗೂ ಅದರ ಅಗತ್ಯವಿಲ್ಲ ಎಂದು ಸೌದಿ ಅರೇಬಿಯ ಶನಿವಾರ ಹೇಳಿದೆ.

ಕತರ್‌ನಲ್ಲಿನ ಸೇನಾ ನೆಲೆಯ ಕಾಮಗಾರಿ ಆರಂಭಗೊಂಡ ಬಳಿಕ, ಸೌದಿ ಅರೇಬಿಯದಲ್ಲೂ ಇದೇ ರೀತಿಯ ನೆಲೆಯನ್ನು ನಿರ್ಮಿಸುವ ಕೊಡುಗೆಯನ್ನು ನೀಡಿರುವುದಾಗಿ ಟರ್ಕಿ ಅಧ್ಯಕ್ಷ ರಿಸೆಪ್ ತಯ್ಯಿಪ್ ಎರ್ದೊಗಾನ್ ಹೇಳಿದ ಬಳಿಕ ಸೌದಿ ಅರೇಬಿಯ ಈ ಪ್ರತಿಕ್ರಿಯೆ ನೀಡಿದೆ.

‘‘ತನ್ನ ಭೂಭಾಗದಲ್ಲಿ ಸೇನಾ ನೆಲೆಯೊಂದನ್ನು ಸ್ಥಾಪಿಸಲು ಸೌದಿ ಅರೇಬಿಯವು ಟರ್ಕಿಗೆ ಅನುಮತಿ ನೀಡಲು ಸಾಧ್ಯವಿಲ್ಲ’’ ಎಂದು ಸೌದಿ ಪ್ರೆಸ್ ಏಜನ್ಸಿಯಲ್ಲಿ ಪ್ರಕಟಗೊಂಡ ಹೇಳಿಕೆಯೊಂದು ತಿಳಿಸಿದೆ.

‘‘ಸೌದಿ ಅರೇಬಿಯಕ್ಕೆ ಇದರ ಅಗತ್ಯವಿಲ್ಲ. ಅದರ ಸಶಸ್ತ್ರ ಪಡೆಗಳು ಮತ್ತು ಸೇನಾ ಸಾಮರ್ಥ್ಯಗಳು ಅತ್ಯುತ್ತಮ ಮಟ್ಟದಲ್ಲಿವೆ’’ ಎಂದು ಅಧಿಕೃತ ಮೂಲವೊಂದನ್ನು ಉಲ್ಲೇಖಿಸಿ ಅದು ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News