ಪ್ರವಾದಿ ಮಸೀದಿಯಲ್ಲಿ ‘ಮುತಾಕಿಫೀನ್’ಗಳ ಸಂಖ್ಯೆ 13,575ಕ್ಕೆ ಏರಿಕೆ

Update: 2017-06-18 14:11 GMT

ಮದೀನಾ (ಸೌದಿ ಅರೇಬಿಯ), ಜೂ. 18: ಮದೀನಾದ ಪ್ರವಾದಿ ಮಸೀದಿಯಲ್ಲಿ ಮುತಾಕಿಫೀನ್ (ರಮಝಾನ್ ತಿಂಗಳ ಕೊನೆಯ 10 ದಿನಗಳಲ್ಲಿ ಮಸೀದಿಯಲ್ಲೇ ವಾಸಿಸುವವರು)ಗಳ ಸಂಖ್ಯೆ 13,575ಕ್ಕೆ ಏರಿದೆ ಎಂದು ಎರಡು ಪವಿತ್ರ ಮಸೀದಿಗಳ ಆಡಳಿತ ಕಚೇರಿ ಘೋಷಿಸಿದೆ.

ಈ ಪೈಕಿ 11,432 ಪುರುಷರು ಮತ್ತು 2,143 ಮಹಿಳೆಯರು ಎಂದು ಕಚೇರಿಯ ಅಧೀನ ಕಾರ್ಯದರ್ಶಿ ಸೌದ್ ಅಲ್ ಸಯೀದಿ ಹೇಳಿರುವುದಾಗಿ ಸೌದಿ ಪ್ರೆಸ್ ಏಜನ್ಸಿ (ಎಸ್‌ಪಿಎ) ವರದಿ ಮಾಡಿದೆ.

 ಮೂರು ಸ್ಥಳಗಳನ್ನು ಪುರುಷರಿಗಾಗಿ ಹಾಗೂ ಒಂದು ಸ್ಥಳವನ್ನು ಮಹಿಳೆಯರಿಗಾಗಿ ನಿಯೋಜಿಸಲಾಗಿದೆ. ಎರಡೂ ಸ್ಥಳಗಳಿಗೆ ತರಬೇತಾದ ಉದ್ಯೋಗಿಗಳು ಮತ್ತು ತಾಂತ್ರಿಕ ಉಪಕರಣಗಳನ್ನು ಒದಗಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಅವರು ಈದ್ ಅಲ್-ಫಿತರ್‌ನ ರಾತ್ರಿ ಇಶಾ ಪ್ರಾರ್ಥನೆಯ ಕೊನೆಯ ವೇಳೆಗೆ ತಮ್ಮ ಮಸೀದಿ ವಾಸ್ತವ್ಯವನ್ನು ಕೊನೆಗೊಳಿಸಬೇಕಾಗಿದೆ.

ಮುಂದಿನ ವರ್ಷದಿಂದ ಪ್ರವಾದಿ ಮಸೀದಿಯಲ್ಲಿ ಇತಿಕಾಫ್ ನಡೆಸಬಯಸುವ ಸ್ವದೇಶೀಯರು ಮತ್ತು ವಿದೇಶೀಯರು ಆನ್‌ಲೈನ್ ಮೂಲಕ ನೋಂದಾಯಿಸಬಹುದಾಗಿದೆ ಹಾಗೂ ಮಸೀದಿಗೆ ಆಗಮಿಸುವ ಮೊದಲು ಕಾರ್ಡ್‌ಗಳನ್ನು ಪಡೆಯಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News