ಅಬುಧಾಬಿ: ಬ್ಯಾರೀಸ್ ವೆಲ್ಫೇರ್ ಫೋರಮ್‌ನಿಂದ "ಇಫ್ತಾರ್ ಗೆಟ್ ಟುಗೆದರ್"

Update: 2017-06-19 08:45 GMT

ಅಬುಧಾಬಿ, ಜೂ.18: ಸಂಯುಕ್ತ ಅರಬ್ ಗಣರಾಜ್ಯ(ಯುಎಇ)ದ ಪ್ರತಿಷ್ಠಿತ ಸಾಮಾಜಿಕ ಸಂಘಟನೆಯಾಗಿರುವ ಬ್ಯಾರೀಸ್ ವೆಲ್ಫೇರ್ ಫೋರಮ್ (ಬಿಡಬ್ಲುಎಫ್) ಇತ್ತೀಚಿಗೆ ‘ಇಫ್ತಾರ್ ಗೆಟ್ ಟುಗೆದರ್’ ಕಾರ್ಯಕ್ರಮವನ್ನು ಆಯೋಜಿಸಿತ್ತು. ಅಬುಧಾಬಿ,ದುಬೈ,ಶಾರ್ಜಾ ಮತ್ತು ಫುಜೈರಾಗಳಿಂದ ಸುಮಾರು 700 ಎನ್ನಾರೈಗಳು ಈ ಕೂಟದಲ್ಲಿ ಪಾಲ್ಗೊಂಡಿದ್ದರು.

ಧಾರ್ಮಿಕ ನಾಯಕ ಅಬ್ದುಲ್ ಸಲಾಂ ಉಪ್ಪಿನಂಗಡಿ ಧಾರ್ಮಿಕ ಉಪನ್ಯಾಸವನ್ನು ನೀಡಿದರು. ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ದಕ್ಷಿಣ ಕನ್ನಡ ಜಿಲ್ಲಾ ಖಾಜಿ ಶೈಖುನಾ ತ್ವಾಕ ಅಹ್ಮದ್ ಮುಸ್ಲಿಯಾರ್ ಅಲ್ ಅಝ್ ಹರಿ ಆಶೀರ್ವಚನ ನೀಡಿದರು.

ಎನ್‌ಎಂಸಿ ಸಮೂಹದ ಅಧ್ಯಕ್ಷ ಹಾಗೂ ಎಂಡಿ ಪದ್ಮಶ್ರೀ ಡಾ.ಬಿ.ಆರ್.ಶೆಟ್ಟಿ ರಮಝಾನ್ ಶುಭಾಶಯಗಳನ್ನು ಕೋರಿ, ಸಮುದಾಯದ ಸದಸ್ಯರ ಬೃಹತ್ ಸಮಾವೇಶವನ್ನು ಆಯೋಜಿಸಿದ್ದಕ್ಕಾಗಿ ಮತ್ತು ಜನಪರ ಕಾರ್ಯಗಳಿಗಾಗಿ ಬಿಡಬ್ಲುಎಫ್ ಅನ್ನು ಪ್ರಶಂಸಿಸಿದರು. ಜೊತೆಗೆ ಸಂಘಟನೆಯ ಜನಪರ ಕಾರ್ಯಗಳಿಗೆ ತನ್ನ ಬೆಂಬಲವನ್ನು ಘೋಷಿಸಿದರು. ದ.ಕನ್ನಡ ಮತ್ತು ಉಡುಪಿ ಮುಸ್ಲಿಂ ಸೆಂಟ್ರಲ್ ಕಮಿಟಿ ಇದರ ಅಧ್ಯಕ್ಷ ಮುಹಮ್ಮದ್ ಮಸೂದ್ ಮಾತನಾಡಿ, ಬಿಡಬ್ಲುಎಫ್‌ನ ನಿಸ್ವಾರ್ಥ ಸೇವೆಯನ್ನು ಶ್ಲಾಘಿಸಿದರು.

ಇಫ್ತಾರ್ ಮತ್ತು ನಮಾಝ್ ಬಳಿಕ ಏರ್ಪಡಿಸಲಾಗಿದ್ದ ಸಂಕ್ಷಿಪ್ತ ಕಾರ್ಯಕ್ರಮದಲ್ಲಿ ಎಲ್ಲ ಗಣ್ಯರಿಗೆ ರಮಝಾನ್ ಉಡುಗೊರೆಗಳನ್ನು ನೀಡಿ ಶುಭ ಹಾರೈಸಲಾಯಿತು.
ಯುಎಇ ಎಕ್ಸ್ ಚೇಂಜ್ ಗ್ಲೋಬಲ್ ಆಪರೇಷನ್ಸ್‌ನ ಅಧ್ಯಕ್ಷ ಸುಧೀರ್ ಶೆಟ್ಟಿ, ಯೂನಿವರ್ಸಲ್ ಹಾಸ್ಪಿಟಲ್‌ನ ಡಾ.ಶಾನವಾಝ್, ಆಡಿಯಾದ ಫಕ್ರುದ್ದೀನ್ ಭಟ್, ಸಾಹೇಬಾನ್ ಅಬುಧಾಬಿಯ ಆಸಿಫ್ ಭಾಯಿ, ಅಕ್ರಂ ಭಾಯಿ, ಅಲ್ತಾಫ್ ಭಾಯಿ, ಸುಹೈಲ್ ಕುದ್ರೋಳಿ, ಅಲ್ತಾಫ್ ಅಹ್ಮದ್, ಯೂನುಸ್, ಸಲೀಂ ಮತ್ತು ನಯೀಂ ಭಾಯಿಜಿ, ಅಬುಧಾಬಿ ಕರ್ನಾಟಕ ಸಂಘದ ಸರ್ವೋತ್ತಮ ಶೆಟ್ಟಿ, ಜಯರಾಮ ಆಳ್ವ ಮತ್ತು ಸುಂದರ ಶೆಟ್ಟಿ, ಕೆಐಸಿಯ ಮೊಯ್ದೀನ್ ಕುಟ್ಟಿ ಕಕ್ಕಿಂಜೆ, ಕೆಎನ್‌ಆರ್‌ಐ ಫೋರಂನ ನಾಸಿರ್, ಕೆಕೆಎಂಎ ಬಶೀರ್ ಬಿ.ಎಂ., ಅಲ್ತಾಫ್ ಫರಂಗಿಪೇಟೆ, ಬದ್ರುದ್ದೀನ್ ಹೆಂತಾರ್ ಸೇರಿದಂತೆ ದಾರುನ್ನೂರ್ ಪದಾಧಿಕಾರಿಗಳು, ಬಿಸಿಎಫ್‌ನ ಎಂ.ಇ.ಮೂಳೂರು, ಡಾ.ಕಾಪು ಮತ್ತು ಲತೀಫ್ ಮುಲ್ಕಿ, ಕೆಸಿಎಫ್‌ನ ಮುಹಮ್ಮದ್ ಹಕೀಂ ಮತ್ತು ಕಬೀರ್, ಕೆಐಸಿಯ ಅಬ್ದುಲ್ ಖಾದರ್ ಮತ್ತು ಹನೀಫ್ ಅರಿಮೂಲೆ ಮತ್ತು ಇತರ ಹಲವಾರು ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಮುಹಮ್ಮದ್ ಸಿದ್ದೀಕ್, ಅಬ್ದುಲ್ ರವೂಫ್ ದರ್ಕಾಸ್, ಅಬ್ದುಲ್ ಬಶೀರ್ ಹಸನ್ ಬಜ್ಪೆ, ಅಬೂಬಕರ್ ಸಿದ್ದಿಕ್ ಉಚ್ಚಿಲ, ಮುಹಮ್ಮದ್ ಕಲ್ಲಾಪು, ಮುಹಮ್ಮದ್ ಹನೀಫ್ ಉಳ್ಳಾಲ, ನಝೀರ್ ಉಬಾರ್, ಇಮ್ರಾನ್ ಅಹ್ಮದ್ ಅಬ್ದುಲ್ಲಾ, ಅಬ್ದುಲ್ ಮಜೀದ್ ಎ.ಜಿ., ಅಬ್ದುಲ್ ಹನೀಫ್ ಗುರುಪುರ, ಅಬ್ದುಲ್ ಜಲೀಲ್ ಜಿ.ಎಚ್., ಅಬ್ದುಲ್ ಮಜೀದ್ ಆತೂರು, ಮೊಯಿನುದ್ದೀನ್ ಹಂಡೇಲ್, ಅಹ್ಮದ್ ನವಾಝ್ ಉಚ್ಚಿಲ, ಅಬ್ದುಲ್ ರಶೀದ್ ವಿ.ಕೆ., ಹಂಝ ಅಬ್ದುಲ್ ಖಾದರ್, ಅಬ್ದುಲ್ ರಶೀದ್ ಬಿಜೈ, ಅಬ್ದುಲ್ ಸಲೀಂ(ಎಎಸ್‌ಎಬಿ), ಅಬೂಬಕರ್ ಉಬಾರ್, ಅಲ್ತಾಫ್ ತಕ್ರೀರ್, ಅಬ್ದುಲ್ ಮುಜೀಬ್ ಮೊದಲಾದವರು ಸಹಕರಿಸಿದರು.

ಬಿಡಬ್ಲುಎಫ್ ಅಧ್ಯಕ್ಷ ಮುಹಮ್ಮದ್ ಅಲಿ ಉಚ್ಚಿಲ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಐತಾಮ್ ಹಮೀದ್ ಕುರ್ ಆನ್ ಪಠಿಸಿದರು. ಜಲೀಲ್ ಗುರುಪುರ ಅನುವಾದಿಸಿದರು. ಪ್ರ.ಕಾರ್ಯದರ್ಶಿ ಅಬ್ದುಲ್ಲಾ ಮದುಮೂಲೆ ಸಂಘಟನೆಯು ಮಂಗಳೂರಿನಲ್ಲಿ ನಡೆಸಿದ ಜನಪರ ಕಾರ್ಯಗಳ ವಿವರಗಳನ್ನು ನೀಡಿದರು. ಬಿಡಬ್ಲುಎಫ್‌ನ ಉಪಾಧ್ಯಕ್ಷ ರಫೀಕ್ ಕೃಷ್ಣಾಪುರ ಮತ್ತು ಜಲೀಲ್ ಗುರುಪುರ ಕಾರ್ಯಕ್ರಮ ನಿರ್ವಹಿಸಿದರು. ಬಿಡಬ್ಲುಎಫ್‌ನ ಸಹ ಸಂಘಟಕ ಇಮ್ರಾನ್ ಅಹ್ಮದ್ ವಂದಿಸಿದರು.
ಸಂಕಿಪ್ತ ಕಾರ್ಯಕ್ರಮದಲ್ಲಿ ಎಲ್ಲಾ ಗಣ್ಯರು ನೆರೆದ ಸಭಿಕರಿಗೆ ರಮಝಾನ್ ಶುಭ ಕೋರಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News