ಬಹರೈನ್‌ನಲ್ಲಿ ಬಾಂಬ್ ಸ್ಫೋಟ: 1 ಸಾವು

Update: 2017-06-20 15:35 GMT

ದುಬೈ, ಜೂ. 20: ಬಹರೈನ್ ರಾಜಧಾನಿ ಮನಾಮದ ಹೊರವಲಯದ ಗ್ರಾಮವೊಂದರಲ್ಲಿ ಸಂಭವಿಸಿದ ಬಾಂಬ್ ಸ್ಫೋಟವೊಂದರಲ್ಲಿ ಓರ್ವ ವ್ಯಕ್ತಿ ಮೃತಪಟ್ಟಿದ್ದಾರೆ ಎಂದು ಆಂತರಿಕ ಸಚಿವಾಲಯ ಮಂಗಳವಾರ ತಿಳಿಸಿದೆ.

ಇದು ಮನಾಮದ ಉಪನಗರದಲ್ಲಿ ಈ ವಾರ ನಡೆಯುತ್ತಿರುವ ಎರಡನೆ ಸ್ಫೋಟವಾಗಿದೆ.

ಎರಡನೆ ಸ್ಫೋಟ ಯಾವಾಗ ನಡೆಯಿತು ಎಂಬ ವಿವರವನ್ನು ಆಂತರಿಕ ಸಚಿವಾಲಯ ನೀಡಿಲ್ಲ. ಸೋಮವಾರ ಮೃತದೇಹವೊಂದನ್ನು ಪತ್ತೆಹಚ್ಚಲಾಗಿದೆ ಹಾಗೂ ಆ ವ್ಯಕ್ತಿ ಬಾಂಬ್ ಸ್ಫೋಟದಲ್ಲಿ ಮೃತಪಟ್ಟಿರುವುದು ದೃಢಪಟ್ಟಿದೆ ಎಂದಷ್ಟೇ ಹೇಳಿದೆ.

ಮನಾಮದ ಹೊರವಲಯದಲ್ಲಿ ರವಿವಾರ ರಾತ್ರಿ ನಡೆದ ಸ್ಫೋಟದಲ್ಲಿ ಓರ್ವ ಪೊಲೀಸ್ ಸಿಬ್ಬಂದಿ ಮೃತಪಟ್ಟಿದ್ದಾರೆ ಹಾಗೂ ಇಬ್ಬರು ನಾಗರಿಕರು ಗಾಯಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News