ದುಬೈಯಲ್ಲಿ ಜಗತ್ತಿನ ಮೊದಲ ಎಂಡೋಮೆಂಟ್ ಪಾರ್ಕ್

Update: 2017-06-20 15:44 GMT

ದುಬೈ, ಜೂ. 20: ಜಗತ್ತಿನ ಮೊದಲ ‘ಎಂಡೋಮೆಂಟ್ (ದಾನ) ಪಾರ್ಕ್’ ಸ್ಥಾಪನೆಗೆ ಯೋಜನೆ ರೂಪಿಸುತ್ತಿರುವುದಾಗಿ ದುಬೈ ನಗರ ಘೋಷಿಸಿದೆ. ಈ ಯೋಜನೆಯು ಕೃಷಿ ದೇಣಿಗೆಯ ರೂಪದಲ್ಲಿ ತಾಳೆ ಗಿಡಗಳನ್ನು ದಾನ ನೀಡಲು ಸಮುದಾಯದ ಸದಸ್ಯರಿಗೆ ಅವಕಾಶ ಮಾಡಿಕೊಡಲಿದೆ.

ದುಬೈ ಮುನಿಸಿಪಾಲಿಟಿ ಮತ್ತು ಮುಹಮ್ಮದ್ ಬಿನ್ ರಶೀದ್ ಗ್ಲೋಬಲ್ ಸೆಂಟರ್ ಫಾರ್ ಎಂಡೋಮೆಂಟ್ ಕನ್ಸಲ್ಟನ್ಸಿಯ ಸಹಭಾಗಿತ್ವದಲ್ಲಿ ಎಂಡೋಮೆಂಟ್ ಪಾರ್ಕ್ ಯೋಜನೆ ರೂಪುಗೊಳ್ಳುತ್ತಿದೆ.

ಮುಶ್ರಿಫ್ ಪಾರ್ಕ್‌ಗೆ ಹೊಂದಿಕೊಂಡಿರುವ ಎಂಡೋಮೆಂಟ್ ಪಾರ್ಕ್ 15 ಹೆಕ್ಟೇರ್ ಪ್ರದೇಶದಲ್ಲಿ ತಲೆಯೆತ್ತಲಿದೆ. ಅಲ್ಲಿಯೇ ಖರ್ಜೂರ ಪ್ಯಾಕ್ ಮಾಡುವ ಕಾರ್ಖಾನೆಯೊಂದನ್ನೂ ಸ್ಥಾಪಿಸಲಾಗುವುದು. ಇದರ ಸಮಗ್ರ ಉತ್ಪನ್ನವನ್ನು ಯುಎಇಯ ಅಗತ್ಯವಿರುವ ಕುಟುಂಬಗಳಿಗೆ ದಾನ ಮಾಡಲಾಗುವುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News