ಕೂರ್ಗ್ ಈದ್ ಮೀಟ್: ಹೊನಲು ಬೆಳಕಿನ ಕ್ರಿಕೆಟ್, ವಾಲಿಬಾಲ್ ಪಂದ್ಯಾವಳಿ

Update: 2017-06-21 12:46 GMT

ದುಬೈ, ಜೂ. 21: ದುಬೈಯ ಅಲ್ ಕೂಸಿನಲ್ಲಿರುವ ಡಲ್ಸ್ಕೊ ಸ್ಪೋರ್ಟ್ಸ್ ಈವೆಂಟ್ಸ್ ಮೈದಾನದಲ್ಲಿ ಕೊಡಗಿನ ಅನಿವಾಸಿ ಜನರಿಗಾಗಿ ಹೊನಲು ಬೆಳಕಿನ ಸೂಪರ್ - 8 ಕ್ರಿಕೆಟ್ ಪಂದ್ಯಾವಳಿ ಮತ್ತು ವಾಲಿಬಾಲ್ ಹಾಗೂ 100 ಮೀಟರ್, 400 ಮೀಟರ್ ಓಟದ ಸ್ಪರ್ಧೆ ನಡೆಯಲಿದೆ.

ಈ ಪಂದ್ಯಾಟಕ್ಕೆ ಕ್ರಿಕೆಟ್ ಗೆ 12  ಹಾಗು ವಾಲಿಬಾಲ್ ಗೆ 10 ತಂಡಗಳು ಹೆಸರು ನೊಂದಾಯಿಸಿದ್ದು ಕೊಡಗಿನ ಕ್ರೀಡಾಪಟುಗಳು ಮಾತ್ರ ಅವಕಾಶ ಹೊಂದಿದ್ದಾರೆ. 

ಈ ಕ್ರೀಡಾಕೂಟದ ಉದ್ಘಾಟನೆ ಮತ್ತು ಸಮಾರೋಪ ಸಮಾರಂಭಕ್ಕೆ ಹಲವಾರು ಸಂಘ ಸಂಸ್ಥೆಗಳ ನೇತಾರರು, ರಾಜಕೀಯ ನಾಯಕರು,ಹಿರಿಯ ಮುಖಂಡರು ಆಗಮಿಸುವರು ಎಂದು ಪ್ರಕಟನೆ ತಿಳಿಸಿದೆ. ಹೆಚ್ಚಿನ ಮಾಹಿತಿಗಾಗಿ ರಫೀಕಲಿ ಕುಂಡಂಡ ಕುಂಜಿಲ ಮೊ. 0567012123, ವಾಲಿಬಾಲ್ ಪಂದ್ಯಾವಳಿ ಮಾಹಿತಿಗಾಗಿ ಸುಹೈಲ್ ಗುಂಡಿಕೆರೆ ಮೊ. 0527401331 ಸಂಪರ್ಕಿಸಬಹುದು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News