ಫೇಸ್‌ಬುಕ್ ಲೈವ್‌ನಲ್ಲಿ ಆತ್ಮಹತ್ಯೆ ಮಾಡುತ್ತಿದ್ದ ಯುವಕನ ರಕ್ಷಣೆ

Update: 2017-06-21 14:24 GMT

ದುಬೈ, ಜೂ. 21: ಕೌಟುಂಬಿಕ ಸಮಸ್ಯೆಗಳಿಂದ ಬೇಸತ್ತು ಫೇಸ್‌ಬುಕ್‌ನಲ್ಲಿ ನೇರಪ್ರಸಾರ (ಲೈವ್)ದಲ್ಲಿ ಆತ್ಮಹತ್ಯೆ ಮಾಡಲು ಯತ್ನಿಸುತ್ತಿದ್ದ ಜರ್ಮನಿಯ ಯುವಕನೊಬ್ಬನನ್ನು ಯುಎಇಯ ರಾಸ್ ಅಲ್ ಖೈಮಾ ಪೊಲೀಸರು ಮಂಗಳವಾರ ರಾತ್ರಿ ರಕ್ಷಿಸಿದ್ದಾರೆ.

ಫೇಸ್‌ಬುಕ್ ಲೈವ್ ವೀಡಿಯೊವನ್ನು ಗಮನಿಸಿದ ಯುವಕನ ಸಹೋದರ ರಾಸ್ ಅಲ್ ಖೈಮ ಪೊಲೀಸರಿಗೆ ಮಾಹಿತಿ ನೀಡಿದರು. ಪೊಲೀಸರು ದಾಖಲೆ ಅವಧಿಯಲ್ಲಿ ಸ್ಥಳಕ್ಕೆ ಧಾವಿಸಿ ಯುವಕನನ್ನು ರಕ್ಷಿಸಿದರು.

ಪೊಲೀಸರು ಸ್ಥಳಕ್ಕೆ ಹೋಗುವಾಗ ಯುವಕನು ಬಳಲಿದ್ದನು ಹಾಗೂ ಗಂಭೀರ ಸ್ಥಿತಿಯಲ್ಲಿದ್ದನು.

ಸ್ಥಳಕ್ಕೆ ರಕ್ಷಣಾ ಹೆಲಿಕಾಪ್ಟರೊಂದನ್ನೂ ಕಳುಹಿಸಲಾಗಿದ್ದು, ಅದರಲ್ಲಿ ಯುವಕನನ್ನು ಸಮೀಪದ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News