ಕತರ್‌ಗೆ ಸೇರಿದ 15,000 ಒಂಟೆಗಳ ಗಡೀಪಾರು

Update: 2017-06-21 17:59 GMT

ಸೌದಿ ಅರೆಬಿಯ, ಜೂ.21: ಕತರ್‌ನೊಂದಿಗೆ ಎಲ್ಲಾ ಸಂಬಂಧಗಳನ್ನು ಕಡಿದುಕೊಂಡಿರುವುದಾಗಿ ಜೂನ್ 5ರಂದು ಘೋಷಿಸಿದ್ದ ಸೌದಿ ಅರೆಬಿಯ, ಇದೀಗ ಕತರ್‌ಗೆ ಸೇರಿದ ಒಂಟೆಗಳನ್ನೂ ಗಡೀಪಾರುಗೊಳಿಸಲು ಕ್ರಮ ಕೈಗೊಂಡಿದೆ.

ಗಡೀಪಾರು ಆದೇಶ ಜಾರಿಗೊಳಿಸಿದ ಬಳಿಕ ಗಡಿಭಾಗದಲ್ಲಿ ಸಾವಿರಾರು ಒಂಟೆಗಳು ಸಿಕ್ಕಿಬಿದ್ದಿದ್ದು ಸರಿಯಾಗಿ, ನೀರು ಮತ್ತು ಆಹಾರ ಕೂಡಾ ಲಭಿಸದೆ ಅಸಹಾಯಕ ಸ್ಥಿತಿಯಲ್ಲಿವೆ ಎಂದು ಕತಾರ್‌ನ ಒಂಟೆಗಳ ಮಾಲಕನೋರ್ವ ತಿಳಿಸಿದ್ದಾನೆ.
 5,500 ಚದರ ಮೈಲಿ ವಿಸ್ತಾರದ ದ್ವೀಪವಾಗಿರುವ ಕತರ್‌ನಲ್ಲಿ ಒಂಟೆಗಳಿಗೆ ಸಾಕಷ್ಟು ಹುಲ್ಲು ದೊರಕದ ಕಾರಣ ಒಂಟೆಗಳ ಮಾಲಕರು ತಮ್ಮ ಒಂಟೆಗಳ ಸಹಿತ ಸೌದಿ ಅರೆಬಿಯದ ಗಡಿ ದಾಟಿ ಅಲ್ಲಿ ಒಂಟೆಗಳಿಗೆ ಹುಲ್ಲು ಮೇಯಿಸುತ್ತಿದ್ದರು. ಇದೀಗ ಈ ಕಾರ್ಯಕ್ಕೆ ವಿಘ್ನ ಬಂದಿದೆ. ಕತರ್‌ನ ಸುಮಾರು 15,000 ಒಂಟೆಗಳನ್ನು ಇದೀಗ ಗಡೀಪಾರು ಮಾಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News