ಯುಎಇ: ವಾಟ್ಸ್ಯಾಪ್ ವೀಡಿಯೋ, ವಾಯ್ಸ್ ಕಾಲ್ ಮೇಲಿನ ನಿರ್ಬಂಧ ತೆರವು

Update: 2017-06-22 10:31 GMT

ಯುಎಇ, ಜೂ.22: ವಾಟ್ಸ್ಯಾಪ್ ನಲ್ಲಿನ ವಿಡಿಯೋ ಹಾಗೂ ವಾಯ್ಸ್ ಕಾಲ್ ಸೌಲಭ್ಯ ಇದೀಗ ಯುಎಇ ನಿವಾಸಿಗಳಿಗೆ ಲಭ್ಯವಾಗುತ್ತಿದೆ. ಯುಎಇಯ ಹಲವಾರು ವಾಟ್ಸ್ಯಾಪ್ ಬಳಕೆದಾರರು ವಾಯ್ಸ್ ಹಾಗೂ ವಿಡಿಯೋ ಕಾಲ್ ಸೌಲಭ್ಯ ಸಿಗುತ್ತಿರುವುದಾಗಿ ಹೇಳಿದ್ದಾರೆ. ಆದರೆ  ಈ ಬಗ್ಗೆ ಯುಎಇ ಅಧಿಕಾರಿಗಳು ಯಾವುದೇ ಘೋಷಣೆ ಹೊರಡಿಸಿಲ್ಲ.

ಗಲ್ಫ್ ನ್ಯೂಸ್ ಹಾಗೂ ಖಲೀಜ್ ಟೈಮ್ಸ್ ಕೂಡ ಈ ಸುದ್ದಿಯನ್ನು ಖಚಿತಪಡಿಸಿದೆ. ಈ ಬಗ್ಗೆ ಹಲವರು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕುತ್ತಿದ್ದಾರೆ. ನಿಷೇಧ ತೆರವಿನಿಂದಾಗಿ ಯುಎಇಯಲ್ಲಿರುವ ಸುಮಾರು 2.6 ಮಿಲಿಯನ್ ಭಾರತೀಯರು ತಮ್ಮ ಕುಟುಂಬಸ್ಥರನ್ನು ಸಂಪರ್ಕಿಸಬಹುದು ಎನ್ನುವ ಸಂತಸದಲ್ಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News