ದುಬೈ: ಅಂತಾರಾಷ್ಟ್ರೀಯ ಸಹಿಷ್ಣುತೆ ಸಂಸ್ಥೆ ಸ್ಥಾಪನೆ

Update: 2017-06-22 13:43 GMT

ದುಬೈ, ಜೂ. 22: ಅಂತಾರಾಷ್ಟ್ರೀಯ ಸಹಿಷ್ಣುತೆ ಸಂಸ್ಥೆ ಸ್ಥಾಪನೆಗೆ ಪೂರಕವಾದ ಕಾನೂನೊಂದನ್ನು ಯುಎಇ ಉಪಾಧ್ಯಕ್ಷ ಹಾಗೂ ಪ್ರಧಾನಿ ಹಾಗೂ ದುಬೈ ಆಡಳಿತಗಾರ ಶೇಖ್ ಮುಹಮ್ಮದ್ ಬಿನ್ ರಶೀದ್ ಅಲ್ ಮಕ್ತೂಮ್ ಜಾರಿಗೊಳಿಸಿದ್ದಾರೆ.

ಅಂತಾರಾಷ್ಟ್ರೀಯ ಸಹಿಷ್ಣುತೆ ಸಂಸ್ಥೆಗೆ ಟ್ರಸ್ಟಿಗಳ ಮಂಡಳಿಯೊಂದನ್ನು ಸ್ಥಾಪಿಸುವ ಹಾಗೂ ಆಡಳಿತ ನಿರ್ದೇಶಕರನ್ನು ನೇಮಿಸುವುದಕ್ಕೆ ಸಂಬಂಧಿಸಿದ ಆದೇಶಗಳನ್ನೂ ಅವರು ಹೊರಡಿಸಿದ್ದಾರೆ.

ಅಂತಾರಾಷ್ಟ್ರೀಯ ಸಹಿಷ್ಣುತೆ ಸಂಸ್ಥೆಯ ಸ್ಥಾಪನೆಗೆ ಕಾರಣವಾದ ಕಾನೂನಿನ ಅಡಿಯಲ್ಲೇ ಮುಹಮ್ಮದ್ ಬಿನ್ ರಶೀದ್ ಅಲ್ ಮಕ್ತೂಮ್ ಸಹುಷ್ಣುತಾ ಪ್ರಶಸ್ತಿಯನ್ನೂ ಸ್ಥಾಪಿಸಲಾಗುವುದು.

ಅಂತಾರಾಷ್ಟ್ರೀಯ ಸಹಿಷ್ಣುತೆ ಸಂಸ್ಥೆಯು ಸಮಾಜದಲ್ಲಿ ಸಹಿಷ್ಣುತೆಯ ಆಶಯವನ್ನು ಸೃಷ್ಟಿಸುವ, ಸೌಹಾರ್ದ ಸಮಾಜವನ್ನು ನಿರ್ಮಿಸುವ ಹಾಗೂ ಸಹಿಷ್ಣುತೆ, ಉಗ್ರವಾದ ನಿಗ್ರಹ ಮತ್ತು ಜನರ ನಡುವಿನ ಎಲ್ಲ ವಿಧಗಳ ತಾರತಮ್ಯಗಳನ್ನು ಹೋಗಲಾಡಿಸುವಲ್ಲಿ ಯುಎಇಯನ್ನು ಮಾದರಿಯನ್ನಾಗಿಸುವ ಗುರಿಯನ್ನು ಹೊಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News