×
Ad

ಪುತ್ರನಿಗೆ ಯುವರಾಜ ಪಟ್ಟ: ಸೌದಿ ದೊರೆಗೆ ಅಭಿನಂದನೆ

Update: 2017-06-22 21:02 IST

ದುಬೈ, ಜೂ. 22: ನೂತನ ಪಟ್ಟದ ಯುವರಾಜನಾಗಿ ಮುಹಮ್ಮದ್ ಬಿನ್ ಸಲ್ಮಾನ್‌ರನ್ನು ನೇಮಿಸಿರುವುದಕ್ಕಾಗಿ ಸೌದಿ ಅರೇಬಿಯದ ದೊರೆ ಸಲ್ಮಾನ್‌ರನ್ನು ದುಬೈ ಆಡಳಿತಗಾರ ಹಾಗೂ ಯುಎಇಯ ಉಪಾಧ್ಯಕ್ಷ ಹಾಗೂ ಪ್ರಧಾನಿ ಶೇಖ್ ಮುಹಮ್ಮದ್ ಬಿನ್ ರಶೀದ್ ಅಲ್ ಮಕ್ತೂಮ್ ಮತ್ತು ಯಮನ್ ಮತ್ತು ಕುವೈತ್‌ನ ಆಡಳಿತಗಾರರು ಅಭಿನಂದಿಸಿದ್ದಾರೆ.

 ತನ್ನ 31 ವರ್ಷದ ಪುತ್ರನನ್ನು ಯುವರಾಜನಾಗಿ ನೇಮಿಸಿರುವುದಕ್ಕಾಗಿ ಸೌದಿ ದೊರೆಯನ್ನು ಅಭಿನಂದಿಸಿ ಕುವೈತ್ ದೊರೆ ಶೇಖ್ ಸಬಾ ಅಲ್ ಅಹ್ಮದ್ ಅಲ್ ಸಬಾ ಬುಧವಾರ ಅಭಿನಂದನಾ ಸಂದೇಶವೊಂದನ್ನು ಕಳುಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News