ಟರ್ಕಿಯಿಂದ ಕತರ್‌ಗೆ ಹೊರಟ ಸರಕು ಹಡಗು

Update: 2017-06-22 16:47 GMT

ಇಸ್ತಾಂಬುಲ್ (ಟರ್ಕಿ), ಜೂ. 22: ಕೊಲ್ಲಿ ಅರಬ್ ದೇಶಗಳಿಂದ ನಿಷೇಧಕ್ಕೆ ಗುರಿಯಾಗಿರುವ ತನ್ನ ಪ್ರಾದೇಶಿಕ ಮಿತ್ರದೇಶ ಕತರ್‌ಗೆ ಟರ್ಕಿ ಗುರುವಾರ ನೆರವು ಪದಾರ್ಥಗಳನ್ನು ಒಳಗೊಂಡ ಪ್ರಥಮ ಹಡಗನ್ನು ಕಳುಹಿಸಿದೆ ಎಂದು ಟರ್ಕಿಯ ಅಧಿಕೃತ ಅನಡೊಲು ವಾರ್ತಾ ಸಂಸ್ಥೆ ತಿಳಿಸಿದೆ.

ಕತರ್ ಭಯೋತ್ಪಾದನೆಗೆ ನೆರವು ನೀಡುತ್ತಿದೆ ಎಂದು ಆರೋಪಿಸಿ ಅದರ ನೆರೆಯ ದೇಶಗಳಾದ ಸೌದಿ ಅರೇಬಿಯ, ಯುಎಇ, ಬಹರೈನ್, ಈಜಿಪ್ಟ್ ಮುಂತಾದ ದೇಶಗಳು ಅದರೊಂದಿಗಿನ ರಾಜತಾಂತ್ರಿಕ ಸಂಬಂಧವನ್ನು ಕಡಿದುಕೊಂಡಿರುವುದನ್ನು ಸ್ಮರಿಸಬಹುದಾಗಿದೆ.

ಟರ್ಕಿ ಈಗಾಗಲೇ ಆಹಾರ ಮತ್ತು ಇತರ ನೆರವು ವಸ್ತುಗಳನ್ನು ಒಳಗೊಂಡ 100ಕ್ಕೂ ಅಧಿಕ ವಿಮಾನಗಳನ್ನು ಕತರ್‌ಗೆ ಕಳುಹಿಸಿದೆ. ಆದರೆ, ಟರ್ಕಿಯಿಂದ ನೆರವು ಪದಾರ್ಥಗಳನ್ನು ಹೊತ್ತುಕೊಂಡು ಸರಕು ಹಡಗೊಂದು ಕತರ್‌ಗೆ ಹೋಗುತ್ತಿರುವುದು ಇದೇ ಮೊದಲ ಬಾರಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News