ಕತರ್‌ಗೆ ಪ್ರತಿ ದಿನ ಇರಾನ್‌ನಿಂದ 1,100 ಟನ್ ಆಹಾರ

Update: 2017-06-23 14:29 GMT

ಟೆಹರಾನ್, ಜೂ. 23: ಸೌದಿ ಅರೇಬಿಯ, ಯುಎಇ, ಬಹರೈನ್, ಈಜಿಪ್ಟ್ ಮತ್ತು ಇತರ ಕೆಲವು ದೇಶಗಳು ಕತರ್‌ನೊಂದಿಗೆ ರಾಜತಾಂತ್ರಿಕ ಸಂಬಂಧವನ್ನು ಕಡಿದುಕೊಂಡ ಬಳಿಕ, ಇರಾನ್ ಆ ದೇಶಕ್ಕೆ ಪ್ರತಿ ದಿನ 1,100 ಟನ್‌ಗೂ ಅಧಿಕ ಹಣ್ಣುಗಳು ಮತ್ತು ತರಕಾರಿಗಳನ್ನು ಕಳುಹಿಸಿಕೊಡುತ್ತಿದೆ.

ಭಯೋತ್ಪಾದಕ ಗುಂಪುಗಳಿಗೆ ಕತರ್ ಬೆಂಬಲ ನೀಡುತ್ತಿದೆ ಹಾಗೂ ಇರಾನ್‌ನ ರಾಜಕೀಯ ನಾಯಕತ್ವದೊಂದಿಗೆ ಅದು ನಿಕಟ ಸಂಬಂಧವನ್ನು ಹೊಂದಿದೆ ಎಂಬ ಆರೋಪದಲ್ಲಿ ಕೊಲ್ಲಿ ಅರಬ್ ದೇಶಗಳು ಜೂನ್ 5ರಂದು ಕತರ್ ಜೊತೆಗಿನ ಸಂಬಂಧವನ್ನು ಕಡಿದುಕೊಂಡಿರುವುದನ್ನು ಸ್ಮರಿಸಬಹುದಾಗಿದೆ.

ಆದರೆ, ಈ ಆರೋಪಗಳನ್ನು ಕತರ್ ನಿರಾಕರಿಸಿದೆ.

ಹಿಂದೆ ಆಹಾರವನ್ನು ಆಮದು ಮಾಡಲು ಕತರ್ ತನ್ನ ನೆರೆಯ ದೇಶಗಳ ಮೂಲಕ ಹಾದು ಬರುವ ರಸ್ತೆ ಸಂಪರ್ಕವನ್ನು ಅವಲಂಬಿಸಿತ್ತು. ಆದರೆ, ನಿಷೇಧದ ಬಳಿಕ ಈ ರಸ್ತೆಗಳು ಮುಚ್ಚಿವೆ.

 ಇರಾನ್ ಕತರ್‌ಗೆ ಪ್ರತಿ ದಿನ 1,100 ಟನ್ ಆಹಾರವನ್ನು ಕಳುಹಿಸಿಕೊಡುತ್ತಿದೆ ಎಂದು ಇರಾನ್‌ನ ಬೂಶಹರ್ ಪ್ರಾಂತದ ಬಂದರುಗಳ ನಿರ್ದೇಶಕರ ಮುಹಮ್ಮದ್ ಮೆಹದಿ ಬೊಂಚಾರಿ ಹೇಳಿರುವುದಾಗಿ ‘ಫಾರ್ಸ್’ ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News