×
Ad

ಯಮನ್‌ನಲ್ಲಿ ರಹಸ್ಯ ಬಂಧನ ಕೇಂದ್ರಗಳಿಲ್ಲ: ಯುಎಇ

Update: 2017-06-24 22:22 IST

ಅಬುಧಾಬಿ, ಜೂ. 24: ದಕ್ಷಿಣ ಯಮನ್‌ನಲ್ಲಿ ಯುಎಇಯ ಸಶಸ್ತ್ರ ಪಡೆಗಳು ರಹಸ್ಯ ಬಂಧನ ಕೇಂದ್ರಗಳನ್ನು ನಡೆಸುತ್ತಿದೆ ಎಂಬ ವರದಿಗಳನ್ನು ಯುಎಇಯ ವಿದೇಶ ವ್ಯವಹಾರಗಳು ಮತ್ತು ಅಂತಾರಾಷ್ಟ್ರೀಯ ಸಹಕಾರ ಸಚಿವಾಲಯ ಪ್ರಬಲವಾಗಿ ಖಂಡಿಸಿದೆ.

 ‘‘ವರದಿಗಳಲ್ಲಿ ಹೇಳಲಾಗಿರುವ ವಿಷಯ ಸಂಪೂರ್ಣ ಸುಳ್ಳು. ಇದು ಭಯೋತ್ಪಾದಕ ಸಂಘಟನೆಗಳ ವಿರುದ್ಧ ಅರಬ್ ಮೈತ್ರಿಕೂಟ ನಡೆಸಿದ ಹೋರಾಟದಿಂದ ಕಂಗೆಟ್ಟ ಶಕ್ತಿಗಳು ಮೈತ್ರಿಕೂಟದ ಹೆಸರು ಹಾಳುಮಾಡಲು ನಡೆಸುತ್ತಿರುವ ಪ್ರಯತ್ನವಾಗಿದೆ’’ ಎಂದು ಶುಕ್ರವಾರ ಬಿಡುಗಡೆ ಮಾಡಿದ ಹೇಳಿಕೆಯೊಂದರಲ್ಲಿ ಸಚಿವಾಲಯ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News