×
Ad

ಯುಎಇ: ಇನ್ನು ಆನ್‌ಲೈನ್‌ನಲ್ಲಿ ಎಂಟ್ರಿ, ವಾಸ್ತವ್ಯ ವೀಸಾ

Update: 2017-07-02 19:18 IST

ಅಬುಧಾಬಿ (ಯುಎಇ), ಜು. 2: ಅಬುಧಾಬಿಯಲ್ಲಿ ಇನ್ನು ನಿಮ್ಮ ಪ್ರೀತಿಪಾತ್ರರಿಗೆ ಪ್ರವೇಶ (ಎಂಟ್ರಿ) ವೀಸಾ ಅಥವಾ ವಾಸ್ತವ್ಯ (ರೆಸಿಡೆನ್ಸ್) ವೀಸಾಗಳನ್ನು ಪಡೆಯುವುದು ಇನ್ನು ತೀರಾ ಸುಲಭ.

ಈಗ ಈ ವೀಸಾಗಳಿಗಾಗಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ‘ಎಮಿರೇಟ್ಸ್ ವಿಶನ್ 2021’ಕ್ಕೆ ಪೂರಕವಾಗಿ ವಾಸ್ತವ್ಯ ಮತ್ತು ವಿದೇಶ ವ್ಯವಹಾರಗಳ ಮಹಾ ನಿರ್ದೇಶನಾಲಯ (ಜಿಡಿಆರ್‌ಎಫ್‌ಎ) ಈ ಆನ್‌ಲೈನ್ ಸೇವೆಗಳನ್ನು ಆರಂಭಿಸಿದೆ.

ಪ್ರವೇಶ ಮತ್ತು ವಾಸ್ತವ್ಯ ವೀಸಾಗಳನ್ನು ಸಂಸ್ಕರಿಸಲು ತನ್ನ ನೂತನ ಸೇವೆಗಳನ್ನು ಬಳಸಿಕೊಳ್ಳುವಂತೆ ಅಬುಧಾಬಿಯಲ್ಲಿ ಪ್ರಧಾನ ಕಚೇರಿ ಹೊಂದಿರುವ ಜಿಡಿಆರ್‌ಎಫ್‌ಎಯ ಮಹಾನಿರ್ದೇಶಕ ಬ್ರಿಗೇಡಿಯರ್ ಮನ್ಸೂರ್ ಅಹ್ಮದ್ ಅಲ್ ದಾಹಿರಿ ನಿವಾಸಿಗಳನ್ನು ಒತ್ತಾಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News