×
Ad

ಕುವೈತ್ ಅಮೀರ್‌ಗೆ ಪ್ರತಿಕ್ರಿಯೆ ಸಲ್ಲಿಸಿದ ಕತರ್

Update: 2017-07-03 22:05 IST

ಕುವೈತ್ ಸಿಟಿ, ಜು. 3: ಕೊಲ್ಲಿ ಬಿಕ್ಕಟ್ಟು ಕೊನೆಗೊಳಿಸುವ ನಿಟ್ಟಿನಲ್ಲಿ ಸೌದಿ ಅರೇಬಿಯ ಮತ್ತು ಇತರ ಮೂರು ಅರಬ್ ದೇಶಗಳು ಸಲ್ಲಿಸಿರುವ ಬೇಡಿಕೆಗಳ ಪಟ್ಟಿಗೆ ತನ್ನ ಅಧಿಕೃತ ಪ್ರತಿಕ್ರಿಯೆಯನ್ನು ಕತರ್ ಸೋಮವಾರ ಕುವೈತ್ ಅಮೀರ್‌ಗೆ ಸಲ್ಲಿಸಿದೆ ಎಂದು ಕೊಲ್ಲಿ ಅಧಿಕಾರಿಯೊಬ್ಬರು ಎಎಫ್‌ಪಿ ಸುದ್ದಿ ಸಂಸ್ಥೆಗೆ ತಿಳಿಸಿದರು.

ಕುವೈತ್‌ಗೆ ಕಿರು ಪ್ರವಾಸ ಕೈಗೊಂಡ ಕತರ್ ವಿದೇಶ ಸಚಿವ ಶೇಖ್ ಮುಹಮ್ಮದ್ ಬಿನ್ ಅಬ್ದುಲ್ ರಹಮಾನ್ ಅಲ್-ಥಾನಿ, ತನ್ನ ದೇಶದ ಪ್ರತಿಕ್ರಿಯೆಯನ್ನು ಕುವೈತ್ ಅಮೀರ್ ಶೇಖ್ ಸಬಾ ಅಲ್-ಅಹ್ಮದ್ ಅಲ್-ಸಬಾರಿಗೆ ಹಸ್ತಾಂತರಿಸಿದರು.

ವಿವರಗಳು ತಿಳಿದುಬಂದಿಲ್ಲ.

ಈ ಬಿಕ್ಕಟ್ಟಿನಲ್ಲಿ ಕುವೈತ್ ಅಮೀರ್ ಸಂಧಾನಕಾರನ ಪಾತ್ರ ವಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News