ಮೊದಲು ವಲಸಿಗ ಆಶ್ರಿತ ತೆರಿಗೆ ಪಾವತಿಸಿ: ಸೌದಿ

Update: 2017-07-03 16:43 GMT

ರಿಯಾದ್, ಜು. 3: ವಲಸಿಗ ಕೆಲಸಗಾರರ ಕುಟುಂಬ ಸದಸ್ಯರಿಗೆ ವಿಧಿಸಲಾಗಿರುವ ‘ಆಶ್ರಿತ ತೆರಿಗೆ’ಯನ್ನು ಮುಂಚಿತವಾಗಿ ಪಾವತಿಸದ ಹೊರತು ಇಂಥ ಕೆಲಸಗಾರರಿಗೆ ನಿರ್ಗಮನ (ಎಕ್ಸಿಟ್)/ಮರುಪ್ರವೇಶ (ರೀ ಎಂಟ್ರಿ) ವೀಸಾಗಳನ್ನು ನೀಡಲಾಗುವುದಿಲ್ಲ ಹಾಗೂ ವಾಸ್ತವ್ಯ ಅನುಮತಿಯನ್ನು ನವೀಕರಿಸಲಾಗುವುದಿಲ್ಲ ಎಂದು ಸೌದಿ ಅರೇಬಿಯದ ಆಂತರಿಕ ಸಚಿವಾಲಯದ ಪಾಸ್‌ಪೋರ್ಟ್ಸ್ ಮಹಾ ನಿರ್ದೇಶನಾಲಯ ತಿಳಿಸಿದೆ.

ಸೌದಿ ಅರೇಬಿಯದಲ್ಲಿ ಕೆಲಸ ಮಾಡುತ್ತಿರುವ ವಿದೇಶೀಯರ ಕುಟಂಬ ಸದಸ್ಯರ ಮೇಲೆ ವಿಧಿಸಲಾಗುವ ಆಶ್ರಿತ ತೆರಿಗೆ ಜುಲೈ ಒಂದರಿಂದ ಜಾರಿಗೆ ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News