ಇಂದಿನಿಂದ ಜಿದ್ದಾ ಬೇಸಿಗೆ ಉತ್ಸವ: 10 ಲಕ್ಷ ಸಂದರ್ಶಕರ ನಿರೀಕ್ಷೆ

Update: 2017-07-08 18:01 GMT

ಜಿದ್ದಾ, ಜು. 8: ಈ ಬಾರಿಯ ಜಿದ್ದಾ ಬೇಸಿಗೆ ಉತ್ಸವ ಶನಿವಾರ (ಜುಲೈ 9) ಆರಂಭಗೊಂಡು ಒಂದು ತಿಂಗಳ ಕಾಲ ನಡೆಯಲಿದೆ. 10 ಲಕ್ಷಕ್ಕೂ ಅಧಿಕ ಪ್ರವಾಸಿಗರು ಉತ್ಸವಕ್ಕೆ ಭೇಟಿ ನೀಡುವ ನಿರೀಕ್ಷೆಯಿದೆ.

ಉತ್ಸವದ ಉದ್ಘಾಟನೆಯು ಅಲ್-ಹರಾಮೈನ್ ರಸ್ತೆಯಲ್ಲಿರುವ ಜಂಗಲ್ ಲ್ಯಾಂಡ್ ಥೀಮ್ ಪಾರ್ಕ್‌ನಲ್ಲಿ ನಡೆಯಲಿದೆ.

ಪ್ರತಿ ದಿನ ಸುಮಾರು 50,000 ಸಂದರ್ಶಕರು ಉತ್ಸವಕ್ಕೆ ಆಗಮಿಸುವ ನಿರೀಕ್ಷೆಯಿದೆ ಎಂದು ಜಿದ್ದಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಉಪಾಧ್ಯಕ್ಷ ಮಾಝೆನ್ ಬಿನ್ ಮುಹಮ್ಮದ್ ಬಟ್ಟರ್ಜಿ ತಿಳಿಸಿದರು.

ಉತ್ಸವದಲ್ಲಿ ಪ್ರವಾಸೋದ್ಯಮ, ಮನರಂಜನೆ, ಸಾಂಸ್ಕೃತಿಕ ಕಾರ್ಯಕ್ರಮಗಳು, ಸ್ಪರ್ಧೆಗಳು, ಕ್ರೀಡೆಗಳು, ದೃಶ್ಯ ಪ್ರದರ್ಶನ, ಮಕ್ಕಳು ಮತ್ತು ಕುಟುಂಬಗಳಿಗೆ ಆಟಗಳು ಹಾಗೂ ಇತರ ಸಾಂಸ್ಕೃತಿ ಚಟುವಟಿಕೆಗಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News