ವಿದೇಶದಲ್ಲಿ ಮೃತಪಟ್ಟ ಭಾರತೀಯರ ಮೃತದೇಹ ತರಲು ಪಡೆಯಬೇಕಂತೆ ಪೂರ್ವಾನುಮತಿ !

Update: 2017-07-09 08:23 GMT

ದುಬೈ,ಜು. 9: ಅನಿವಾಸಿ ಭಾರತೀಯರು ವಿದೇಶಗಳಲ್ಲಿ ಮೃತಪಟ್ಟರೆ ಅವರ ಮೃತ ದೆಹವವನ್ನು ಊರಿಗೆ ತರಲು 48ಗಂಟೆ ಮೊದಲೇ ಅನುಮತಿ ಪಡೆದಿರಬೇಕೆಂದು ಹೊಸ ಆದೇಶವನ್ನು  ಕೇರಳದ ಕರಿಪ್ಪೂರ್ ವಿಮಾನ ನಿಲ್ದಾಣದಆರೋಗ್ಯಾಧಿಕಾರಿ ಹೊರಡಿಸಿದ್ದು,ಇದು ವಿದೇಶಗಳಲ್ಲಿ ದುಡಿಯುತ್ತಿರುವ ಭಾರತೀಯರಲ್ಲಿ ವ್ಯಾಪಕ ವಿರೋಧಕ್ಕೆ ಕಾರಣವಾಗಿದೆ.ಕರಿಪ್ಪೂರ್‍ನಿಂದ ಆರೋಗ್ಯಾಧಿಕಾರಿ ಈ ಆದೇಶವನ್ನು  ವಿಮಾನ ಕಂಪೆನಿಗಳ ಮೂಲಕ ಶಾರ್ಜ ವಿಮಾನ ನಿಲ್ದಾಣಕ್ಕೆ ಕಳುಹಿಸಿದ್ದಾರೆ.  ಇದು ಅನಿವಾಸಿ ಭಾರತೀಯರಲ್ಲಿ ವ್ಯಾಪಕ ಪ್ರತಿಭಟನೆಗೆ ಮತ್ತುಆಕ್ರೋಶಕ್ಕೆ ಕಾರಣವಾಗಿದೆ.

ಆದೇಶ ಕೇರಳದ ವಿಮಾನ ನಿಲ್ದಾಣದದ್ದಾಗಿದ್ದರೂ ಭಾರತದ ಬೇರೆ ವಿಮಾನನಿಲ್ದಾಣಗಳಿಗೂ ಮೃತದೇಹವನ್ನು ಕೊಂಡೊಯ್ಯಲು ಇದೀಗ ಈ ಆದೇಶದಿಂದಾಗಿ ಅಡ್ಡಿ ಸೃಷ್ಟಿಯಾಗಿದೆ. ಶಾರ್ಜದ ವಿಮಾನ ಕಾರ್ಗೊವಿಭಾಗ ಭಾರತೀಯರ ಮೃತದೇಹವನ್ನು ಸ್ವೀಕರಿಸಲು ಹಿಂದೇಟು ಹಾಕುತ್ತಿರುವುದು ಇದಕ್ಕೆ ಕಾರಣವಾಗಿದೆ.

ವಿವಾದ ಆದೇಶವನ್ನು ಹಿಂಪಡೆಯಬೇಕೆಂದು ಅನಿವಾಸಿ ಭಾರತೀಯರ ಬಲವಾದ ಕೂಗು ಕೇಳಿಬರುತ್ತಿದೆ. ವಿವಿಧ ಅನಿವಾಸಿ ಸಂಘಟನೆಗಳು, ಜನಪ್ರತಿನಿಧಿಗಳು ಮಾಧ್ಯಮಗಳು ಕೇಂದ್ರಸರಕಾರದ ಗಮನಕ್ಕೆ ತಂದರೂ ಸರಕಾರದಿಂದಾಗಲಿ ಸಂಬಂಧಿಸಿದ ಸಚಿವಾಲಯಗಳಿಂದಾಗಲಿ ಯಾವುದೇ ಸ್ಪಷ್ಟ ಪ್ರತಿಕ್ರಿಯೆ ಸಿಕ್ಕಿಲ್ಲ. ಎರಡುವರ್ಷ ಮುಂಬೈ ವಿಮಾನ ನಿಲ್ದಾಣದಲ್ಲಿ ಕೆಲಸ ನಿರ್ವಹಿಸಿ ಇತ್ತೀಚೆಗೆ ಕರಿಪ್ಪೂರ್ ವಿಮಾನ ನಿಲ್ದಾಣ ಆರೋಗ್ಯಾಧಿಕಾರಿಯಾಗಿ ನೇಮಕವಾದ ಜಲಾಲುದ್ದೀನ್ 48 ಗಂಟೆಮೊದಲು ಸಂಬಂಧಿಸಿದ ಸರ್ಟಿಫಿಕೆಟುಗಳನ್ನು ಹಾಜರುಪಡಿಸಿ ಪೂರ್ವಾನುಮತಿ ಪಡೆದುಕೊಳ್ಳಬಹುದು ಎಂದು ಹೇಳುತ್ತಾರೆ. ಮರಣ ಸರ್ಟಿಫಿಕೇಟ್, ಎಂಬಮಿಂಗ್ ಸರ್ಟಿಫಿಕೇಟ್, ಭಾರತದ ದೂತವಾಸದಿಂದ ನಿರಾಕ್ಷೇಪಣಾ ಪತ್ರ (ಎನ್‍ಒಸಿ) ಹಾಗೂ ರದ್ದುಗೊಳಿಸಿದ ಪಾಸ್‍ಪೋರ್ಟ್‍ನ ಝೆರಾಕ್ಸ್ ಪ್ರತಿಯನ್ನು ಹಾಜರುಪಡಿಸಿದರೆ ಕೂಡಲೇ ಮೃತದೇಹವವನ್ನು ಊರಿಗೆ ತರಲು ಅನುಮತಿ ನೀಡಲಾಗುವುದು ಎಂದು ಅವರು ಆದೇಶದಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News