ಉಗ್ರರಿಗೆ ತಕ್ಕ ಶಾಸ್ತಿ: ಸೌದಿ ದೊರೆಯ ಶಪಥ

Update: 2017-07-09 16:40 GMT

ಜಿದ್ದಾ,ಜು.9: ತನ್ನ ದೇಶದ ಸ್ಥಿರತೆ ಹಾಗೂ ಭದ್ರತೆಗೆ ಹಾನಿಯುಂಟು ಮಾಡುವ ದುಸ್ಸಾಹಸಕ್ಕೆ ಕೈಹಾಕುವವರನ್ನು ಕಠಿಣವಾಗಿ ಶಿಕ್ಷಿಸುವುದಾಗಿ ಸೌದಿ ಆರೇಬಿಯದ ದೊರೆ ಹಾಗೂ ಎರಡು ಪವಿತ್ರ ಮಸೀದಿಗಳ ಪಾಲಕರಾದ ಸಲ್ಮಾನ್ ಬಿನ್ ಅಬ್ದುಲ್ಲಾಝೀಜ್ ಅಲ್ ಸೌದ್ ರವಿವಾರ ಎಚ್ಚರಿಕೆ ನೀಡಿದ್ದಾರೆ.

  ಖ್ವಾತಿಫ್‌ನ ಅಲ್‌ಮಸೂವಾರಾ ಜಿಲ್ಲೆಯಲ್ಲಿ ವಾರಾಂತ್ಯದಲ್ಲಿ ನಡೆದ ಭಯೋತ್ಪಾದಕ ದಾಳಿಗಳಲ್ಲಿ ಮೃತಪಟ್ಟ ಇಬ್ಬರು ಯೋಧರ ತಂದೆಯಂದಿರ ಜೊತೆ ದೂರವಾಣಿ ಸಂಭಾಷಣೆ ನಡೆಸಿದ ಸಂದರ್ಭದಲ್ಲಿ ಸಲ್ಮಾನ್ ಈ ಹೇಳಿಕೆ ನೀಡಿದ್ದಾರೆ. ಹುತಾತ್ಮ ಯೋಧರ ಶೋಕತಪ್ತ ಕುಟುಂಬಗಳಿಗೆ ಅವರು ಈ ಸಂದರ್ಭದಲ್ಲಿ ತನ್ನ ಸಂತಾಪ ವ್ಯಕ್ತಪಡಿಸಿದರು.

  ಯೋಧರಾದ ಲ್ಯಾನ್ಸ್ ಕಾರ್ಪೊರಲ ಅದೆಲ್ ಬಿನ್ ಫಲೇಹಂ ಬಿನ್ ಅಯೆದ್ ಅಲ್-ಒಟಾಯಿಬಿ ಹಾಗೂ ಕಾರ್ಪೊರಲ್ ಅಬ್ದುಲ್ಲಾ ಟ್ರಾಯಿಕಿ ಅಲ್ ತುರ್ಕಿ, ಗಸ್ತುಕಾರ್ಯದಲ್ಲಿ ನಿರತರಾಗಿದ್ದ ಅವರ ಮೇಲೆ ಅಜ್ಞಾತ ಉಗ್ರರು ರಾಕೆಟ್ ದಾಳಿ ನಡೆಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News