ಯುಎಇಯಲ್ಲಿ ಧೂಳು ಬಿರುಗಾಳಿ

Update: 2017-07-13 14:29 GMT

ಅಬುಧಾಬಿ, ಜು. 13: ಯುಎಇಯ ಹಲವು ಪ್ರದೇಶಗಳಲ್ಲಿ ಗುರುವಾರ ಬೆಳಗ್ಗೆ ಧೂಳು ಬಿರುಗಾಳಿ ಬೀಸಿದೆ ಎಂದು ರಾಷ್ಟ್ರೀಯ ಹವಾಮಾನ ಮತ್ತು ಭೂಕಂಪ ಕೇಂದ್ರ (ಎನ್‌ಸಿಎಂಎಸ್) ತಿಳಿಸಿದೆ.

ಇದರ ಮುಂದುವರಿದ ಭಾಗವಾಗಿ ದೇಶದ ಹಲವು ಭಾಗಗಳಲ್ಲಿ ಬಲವಾದ ಗಾಳಿ ಮತ್ತು ಧೂಳು ಬಿರುಗಾಳಿ ಬೀಸಬಹುದು ಎಂದು ಅದು ಎಚ್ಚರಿಸಿದೆ.

ಧೂಳು ಬಿರುಗಾಳಿಯು ಶನಿವಾರ ರಾತ್ರಿವರೆಗೂ ಮುಂದುವರಿಯಬಹುದು ಎಂದು ಅದು ಅಂದಾಜಿಸಿದೆ.

ಅದೇ ವೇಳೆ, ಮುಂದಿನ 24 ಗಂಟೆಗಳಲ್ಲಿ ಬಿಸಿ ವಾತಾವರಣವು ಮುಂದುವರಿಯುತ್ತದೆ ಹಾಗೂ ಉಷ್ಣತೆಯು 49 ಡಿಗ್ರಿಯನ್ನು ತಲುಪಬಹುದು ಎಂದು ಅದು ಎಚ್ಚರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News