ಅರಬ್ ಬಿಕ್ಕಟ್ಟು ಮಧ್ಯಸ್ಥಿಕೆಗೆ ಸಿದ್ಧ: ಫ್ರಾನ್ಸ್

Update: 2017-07-16 16:16 GMT

ದೋಹಾ (ಕತರ್), ಜು. 16: ಕತರ್ ಮತ್ತು ಇತರ ನಾಲ್ಕು ಅರಬ್ ದೇಶಗಳ ನಡುವಿನ ಬಿಕ್ಕಟ್ಟನ್ನು ಶಮನಗೊಳಿಸುವ ಮಧ್ಯಸ್ಥಿಕೆಯಲ್ಲಿ ನೆರವು ನೀಡಲು ಫ್ರಾನ್ಸ್ ಸಿದ್ಧವಿದೆ ಎಂದು ಆ ದೇಶದ ವಿದೇಶ ಸಚಿವ ಜೀನ್-ಯವೆಸ್ ಲಿ ಡ್ರಿಯನ್ ಶನಿವಾರ ಇಲ್ಲಿ ಹೇಳಿದ್ದಾರೆ.

‘‘ಮಧ್ಯಸ್ಥಿಕೆ ಏರ್ಪಡಿಸಲು ಫ್ರಾನ್ಸ್ ಪ್ರಯತ್ನಗಳನ್ನು ಮಾಡುತ್ತದೆ’’ ಎಂದು ಕತರ್ ವಿದೇಶ ಸಚಿವ ಶೇಖ್ ಮುಹಮ್ಮದ್ ಬಿನ್ ಅಬ್ದುಲ್ ರಹಮಾನ್ ಅಲ್ ಥಾನಿ ಜೊತೆ ಮಾತುಕತೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಲಿ ಡ್ರಿಯನ್ ಹೇಳಿದರು.

ಕತರ್ ಭಯೋತ್ಪಾದನೆಗೆ ಬೆಂಬಲ ನೀಡುತ್ತಿದೆ ಎಂದು ಆರೋಪಿಸಿ ಸೌದಿ ಅರೇಬಿಯ, ಯುಎಇ, ಬಹರೈನ್ ಮತ್ತು ಈಜಿಪ್ಟ್ ದೇಶಗಳು ಅದರೊಂದಿಗಿನ ರಾಜತಾಂತ್ರಿಕ ಸಂಬಂಧವನ್ನು ಕಡಿದುಕೊಂಡಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News